ಎಫ್-16 ಫೈಟರ್ ವಿಮಾನ ಮಾರಬೇಡಿ, ಪಾಕಿಸ್ತಾನ ವಿಶ್ವಾಸನೀಯ ರಾಷ್ಟ್ರವಲ್ಲ : ಅಮೆರಿಕನ್ ಸಂಸದರು

Update: 2016-02-26 12:57 GMT

   ವಾಶಿಂಗ್ಟನ್, ಫೆ. 26: ಪಾಕಿಸ್ತಾನಕ್ಕೆ-16ಫೈಟರ್ ವಿಮಾನವನ್ನು ಮಾರುವ ಒಬಾಮ ಸರಕಾರದ ನಿರ್ಧಾರ ಸಂಕಷ್ಟಕ್ಕೀಡುಮಾಡಿದೆ. ಪಾಕಿಸ್ತಾನದೊಂದಿಗೆ ಮಾಡಿಕೊಂಡಿರುವ ಶಸ್ತ್ರಾಸ್ತ್ರ ಒಪ್ಪಂದದ ಕುರಿತು ಅಮೆರಿಕದ ಸಂಸತ್ ನಲ್ಲಿ ಅಸಮ್ಮತಿ ಸೂಚಿಸಲಿಕ್ಕಾಗಿ ಅಲ್ಲಿನ ಸಂಸದರು ಹೌಸ್ ಆಫ್ ರಿಪ್ರೆಂಟೇಟಿವ್‌ನಲ್ಲಿ ಒಂದು ಜಂಟಿ ಪ್ರಸ್ತಾವವನ್ನು ಮಂಡಿಸಿದ್ದಾರೆ. ಇದರಲ್ಲಿ ಪಾಕಿಸ್ತಾನಕ್ಕೆ ಮಾರಲಾಗುವ ಎಂಟು ಎಫ್- 16 ವಿಮಾನಗಳ ಕುರಿತು ಉಲ್ಲೇಖವಿದೆ. ಪಾಕಿಸ್ತಾನ ವಿಶ್ವಸ್ಥ ರಾಷ್ಟ್ರವಲ್ಲ ಎಂದು ತಿಳಿಸಲಾಗಿದ್ದು ವಿಮಾನ ಮಾರುವುದನ್ನು ತಡೆಹಿಡಿಯಬೇಕೆಂದು ಪ್ರಸ್ತಾವದಲ್ಲಿ ಆಗ್ರಹಿಸಲಾಗಿದೆ.

   ಡಾನಾ ರೊಹ್‌ರಾಬಚರ್‌ರು ಸದನದಲ್ಲಿ ಪ್ರಸ್ತಾವವನ್ನು ಮಂಡಿಸುತ್ತಾ "ಪಾಕಿಸ್ತಾನ ಸರಕಾರ ಅಮೆರಿಕ ನೀಡಿದ ಆಯುಧಗಳನ್ನು ತಮ್ಮದೆ ನಾಗರಿಕರ ಮೇಲೆ ಅದರಲ್ಲೂ ಬಲೂಚಿಸ್ತಾನದ ಜನರ ದಮನಕ್ಕೆ ಬಳಸುತ್ತಿದೆ" ಎಂದು ಹೇಳಿದ್ದಾರೆ. ಅಮೆರಿಕ ಹೌಸ್ ಆಫ್ ರೆಪ್ರೆಂಟೇಟಿವ್ ಭಾರತದ ಕೆಳ ಮನೆಗೆ(ರಾಜ್ಯಸಭೆಗೆ)ಸಮಾನವಾಗಿದೆ. ಇದಕ್ಕಿಂತ ಮೊದಲು ಅಧ್ಯಕ್ಷ ಪದದ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿ ಹಾಗೂ ಸೆನೆಟರ್ ರ್ಯಾಂಡ್ ಪಾಲ್‌ರು ಪಾಕಿಸ್ತಾನಕ್ಕೆ ಎಫ್ -16 ವಿಮಾನವನ್ನು ಮಾರುವುದರ ವಿರುದ್ಧ ಸೆನೆಟ್‌ನಲ್ಲಿ ಜಂಟಿ ಪ್ರಸ್ತಾವ ತಂದು ಎಫ್-16 ವಿಮಾನಗಳನ್ನು ಮಾರಬಾರದೆಂದು ವಿನಂತಿಸಿದ್ದರು. ವಿದೇಶ ಸಚಿವಾಲಯವು ವಿಮಾನ ಮಾರಾಟದ ಕುರಿತ ಅಧಿಸೂಚನೆಯನ್ನು ಕಾಂಗ್ರೆಸ್ ಇತ್ತೀಚೆಗೆ ನೀಡಿತ್ತು. ಪಾಕಿಸ್ತಾನಕ್ಕೆ ಇತರ ಸೈನಿಕ ಸಾಧನಗಳ ಮಾರಟಕ್ಕೂ ತಡೆಯೊಡ್ಡಬೇಕೆಂದು ಪ್ರಸ್ತಾವದಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News