ಹಳೆಯ ತಾಲಿಬಾನ್ ವಿಡಿಯೊ ಮೂಲಕ ಮುಝಾಫರ್‌ನಗರ ಗಲಭೆಯ ಕಿಡಿ ಹಚ್ಚಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್

Update: 2016-03-08 03:55 GMT

ಲಕ್ನೋ, ಮಾ.8: ನ್ಯಾಯಮೂರ್ತಿ ವಿಷ್ಣು ಸಹಾಯ್ ಆಯೋಗ 2013ರ ಮುಝಾಫರ್‌ನಗರ ಗಲಭೆ ಬಗ್ಗೆ ನೀಡಿದ ವರದಿಯಲ್ಲಿ, "ಪಾಕಿಸ್ತಾನದ ತಾಲಿಬಾನ್ ವಶದಲ್ಲಿದ್ದ ಪ್ರದೇಶದ ಹಳೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಸುಳ್ಳು ವದಂತಿ ಹಬ್ಬಿಸಿ, ವಿಡಿಯೊದಲ್ಲಿ ಕೊಲ್ಲಲ್ಪಟ್ಟ ಇಬ್ಬರು ಹಿಂದೂಗಳು ಎಂದು ಸುಳ್ಳು ಸುದ್ದಿ ಹಬ್ಬಿಸಿ ಹಿಂಸೆ ಪ್ರಚೋದನೆ ನೀಡಲಾಯಿತು" ಎಂದು ಬಹಿರಂಗಪಡಿಸಲಾಗಿದೆ.


 ಪೊಲೀಸರು ನೀಡಿದ ಹೇಳಿಕೆಗಳ ಆಧಾರದಲ್ಲಿ ನ್ಯಾಯಮೂರ್ತಿ ಸಹಾಯ್ ಅವರು, ಬಿಜೆಪಿ ಶಾಸಕ ಸಂಗೀತ್ ಸೋಮ್ ಹಾಗೂ ಇತರ 229 ಮಂದಿ ಇದಕ್ಕೆ ಹೊಣೆ. ಈ ವಿಡಿಯೊವನ್ನು ಅಪ್‌ಲೋಡ್ ಮಾಡುವ ಹಾಗೂ ಷೇರ್ ಮಾಡುವ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ ಎಂದು ವರದಿಯ್ಲಲಿ ಹೇಳಿದ್ದಾರೆ.

ಆದರೆ ಇವರ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿರುವುದರಿಂದ ಯಾವ ಕ್ರಮಕ್ಕೂ ಶಿಫಾರಸ್ಸು ಮಾಡಿಲ್ಲ. ಜತೆಗೆ ಎಫ್‌ಐಆರ್ ಸಾಬೀತಾಗುವವರೆಗೂ ಇವರು ಕೇವಲ ಆರೋಪಿಗಳಾಗಿಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.


ತಾಲಿಬಾನ್ ನಿಯಂತ್ರಣದ ಪಾಕಿಸ್ತಾನ ಪ್ರದೇಶದಲ್ಲಿ ಇಬ್ಬರನ್ನು ಹತ್ಯೆ ಮಾಡುವ ಚಿತ್ರಣ ವಿಡಿಯೊದಲ್ಲಿದ್ದು, ಆದರೆ ಅದನ್ನು ಅಪ್‌ಲೋಡ್ ಮಾಡಿದವರು, 2013ರ ಆಗಸ್ಟ್ ಕೊನೆಯ ವಾರ ಕಾವಲ್‌ನಲ್ಲಿ ಈ ಹತ್ಯೆ ನಡೆದಿದೆ. ಮೃತಪಟ್ಟ ಹಿಂದೂ ಹುಡುಗರು ಸಚಿನ್ ಹಾಗೂ ಗೌರವ್ ಎಂದು ಹೇಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News