ಮಿಲಿಯಾಧೀಶ ಹಾಗೂ ಗುರು ಕಲಿಸಿದ ಪಾಠ

Update: 2016-03-13 18:35 GMT

ಬೆಂಗಳೂರಿನ ಇಬ್ಬರು ಹೆಸರಾಂತ ವ್ಯಕ್ತಿಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸುದ್ದಿಯಾಗತೊಡಗಿದ್ದಾರೆ. ವಿಜಯಮಲ್ಯ ಬ್ಯಾಂಕ್‌ಗಳಿಗೆ ಪಂಗನಾಮ ಹಾಕಿ, ವಿದೇಶದಲ್ಲಿ ಹಾಯಾಗಿ ನಗುತ್ತಿದ್ದರೆ, ಶ್ರೀ ರವಿಶಂಕರ್ ಯಮುನೆ ನದಿಯ ದಡದಲ್ಲಿ ನಗುತ್ತಿದ್ದಾರೆ. ಮಲ್ಯ ತನ್ನ ಕಂಪೆನಿಗಳಿಂದ ಹೊರಹೋಗುತ್ತಿದ್ದೇನೆ ಎಂದು ಹೇಳುತ್ತಲೇ ದೇಶವನ್ನೇ ಬಿಟ್ಟು ಹೋಗಿದ್ದರೆ, ರವಿಶಂಕರ್ ದಿಲ್ಲಿಯ ಪ್ರಾಕೃತಿಕವಾಗಿ ಸೂಕ್ಷ್ಮಸಂವೇದಿ ಸ್ಥಳದಲ್ಲಿ ಝಂಡಾ ಹೂಡಿದ್ದಾರೆ.

ಮಲ್ಯ ತನ್ನ ವೈಯಕ್ತಿಕ ಸಂಪತ್ತು ಹಾಗೂ ತನ್ನ ಉದ್ಯಮದ ಮೂಲಕ ಸಂಪಾದಿಸಿದ ಹಣದ ನಡುವೆ ವ್ಯತ್ಯಾಸವಿರಿಸಿಕೊಂಡಿದ್ದಾರೆ. ಹೀಗಾಗಿ ಅವರು ಮಿಲಿಯಾಧೀಶ ಹಾಗೂ ದಿವಾಳಿಕೋರ ಎರಡೂ ಆಗಿದ್ದಾರೆ. ವಿದೇಶಕ್ಕೆ ಪರಾರಿಯಾದ ಮಲ್ಯ ಮಾಡಿದ ಟ್ವೀಟ್ ಸಂದೇಶ ನನಗೆ ಇಷ್ಟವಾಯಿತು. ‘‘ ಹಲವು ವರ್ಷಗಳಿಂದ ಮಾಧ್ಯಮ ದಣಿಗಳಿಗೆ ನಾನು ನೀಡಿದ ಸಹಾಯ, ಸೌಕರ್ಯವನ್ನು ಅವರು ಮರೆಯಕೂಡದು.ಈಗ ಅವರು ಟಿಆರ್‌ಪಿ ಹೆಚ್ಚಿಸಲು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದರು. ಮಲ್ಯಗೆ ಇಷ್ಟೊಂದು ಸೂಕ್ಷ್ಮತೆ ಇದೆಯೆಂದು ಈ ಹಿಂದೆ ಯಾರೂ ಕೂಡಾ ಅಂದುಕೊಂಡಿರಲಿಲ್ಲ.ನ್ನು ರವಿಶಂಕರ್ ವಿಷಯಕ್ಕೆ ಬರುವುದಾದರೆ, ಅವರು ಭಾರತದ ಸಮಕಾಲೀನ ಗುರುಗಳ ಪೈಕಿ ಅತಿ ಹೆಚ್ಚು ರಾಜಕೀಯ ಸಂಪರ್ಕ ಹೊಂದಿರುವ, ಉದ್ಯಮಶೀಲ ರಾಗಿದ್ದಾರೆ. ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸುವ ಹಂತದಲ್ಲಿ ತಾನಿದ್ದೇನೆಂಬಂತೆ ಅವರು ಪೋಸ್ ಕೊಡುತ್ತಿದ್ದಾರೆ.
ನದಿಯ ದಂಡೆಯೊಂದರಲ್ಲಿ 35 ಲಕ್ಷ ಜನರ ನೂಕುನುಗ್ಗಲನ್ನು ಉಂಟು ಮಾಡುವುದರಲ್ಲಿಯೇ ರವಿಶಂಕರ್ ಆಧ್ಯಾತ್ಮಿಕತೆಯನ್ನು ಕಾಣುತ್ತಿದ್ದಾರೆ. ಗ್ರಾಮೀಣ ಹಾಗೂ ನಗರ ಜನರನ್ನು ಒಗ್ಗೂಡಿಸಲು ತಾನು ಬಯಸುತ್ತಿರುವುದಾಗಿ ಅವರು ದೇಶಾವರಿ ನಗೆಯೊಂದಿಗೆ ಹೇಳುತ್ತಾರೆ. ಒಲಿಂಪಿಕ್ ಕ್ರೀಡಾಕೂಟಕ್ಕಿಂತಲೂ ಹೆಚ್ಚಿನ ಸಂಖ್ಯೆಯ ದೇಶಗಳು ತಾನು ಏರ್ಪಡಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆಯೆಂದು ಅವರು ಹೇಳುತ್ತಾರೆ. ಈ ಸಮಾವೇಶದ ಯಶಸ್ಸಿಗಾಗಿ ನೌಕಾಪಡೆ ಹಾಗೂ ವಾಯುಪಡೆಗಳು ಕೂಡಾ ಅವರ ನೆರವಿಗೆ ಬಂದಿವೆ.
  ಮಲ್ಯ, ರವಿಶಂಕರ್‌ರಂತಹವರು ಇಂದು ಆಧುನಿಕ ಭಾರತದ ‘ಹೀರೋ’ ಗಳೆನಿಸಿಕೊಂಡಿದ್ದಾರೆ. ಭಾರತದಿಂದ ಮಲ್ಯರ ನಿರ್ಗಮನವು ಅವರ ವಿಧಿ (್ಛಠಿಛಿ) ಯಾಗಿದೆ. ಆದರೆ ರವಿಶಂಕರ್‌ಧಾರ್ಮಿಕ ನಂಬಿಕೆ(್ಛಜಿಠಿ)ಯ ಹೆಸರಿನಲ್ಲಿ ಯಮುನೆಯ ದಡದಲ್ಲಿ ವೇದಿಕೆಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಈಗೀಗ ಧಾರ್ಮಿಕ ನಂಬಿಕೆಗಳು, ಸರಕಾರದ ಇಲಾಖೆಗಳಲ್ಲಿಯೂ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಒಟ್ಟಿನಲ್ಲಿ ಈ ಇಬ್ಬರೂ ವ್ಯಕ್ತಿಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸಮಾಜದ ಮೇಲೆಯೂ ಬಿಗಿಯಾದ ಹಿಡಿತವನ್ನು ಹೊಂದಿದ್ದಾರೆಂಬುದಂತೂ ನಿಜ.
  ಮಲ್ಯ ಬ್ಯಾಂಕುಗಳ ಸಾಲವನ್ನು ತೀರಿಸಲು ದೇಶಕ್ಕೆ ವಾಪಸಗಲೂಬಹುದು ಹಾಗೂ ರವಿಶಂಕರ್ ತನ್ನ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಯುಮನಾ ನದಿಯಲ್ಲಿ ಹಾಗೂ ಅದರ ದಂಡೆಯಲ್ಲಿ ಉಂಟಾದ ಕೊಳೆಯನ್ನು ಸ್ವಚ್ಛಗೊಳಿಸಿದ ಬಳಿಕ ಅಲ್ಲೊಂದು ಜೀವವೈವಿಧ್ಯ ಪಾರ್ಕ್ ನಿರ್ಮಿಸಲೂ ಬಹುದು. (ಸಮಾವೇಶದಲ್ಲಿ 35 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆಯಾದರೂ, ಅಲ್ಲಿ ಸ್ಥಾಪಿಸಲಾ ಗಿರುವ ಸಂಚಾರಿ ಟಾಯ್ಲೆಟ್‌ಗಳ ಸಂಖ್ಯೆ ಕೇವಲ 650 !. ಹೇಗಿದೆ ಲೆಕ್ಕಾಚಾರ...).
ನಾವು ಸಂಕಷ್ಟಕ್ಕೆ ಸಿಲುಕುವಾಗ ನಮ್ಮ ಸ್ನೇಹಿತರು ಎಷ್ಟು ಬೇಗನೆ ನಮ್ಮ ಕೈಬಿಡುತ್ತಾರೆಂಬುದು ಮಲ್ಯರಿಗೆ ಅರಿವಾಗಿದೆ. ಪ್ರಾಯಶಃ ರವಿಶಂಕರ್‌ಗೂ ಕೂಡಾ ಟ್ರಾಫಿಕ್ ದಟ್ಟಣೆ,ವಾಯುಮಾಲಿನ್ಯ ಮತ್ತಿತರ ಸಮಸ್ಯೆಗಳಿಂದ ನರಳುತ್ತಿ ರುವ ದಿಲ್ಲಿಯಲ್ಲಿ ತನ್ನ ಅಭಿಮಾನಿಗಳ ಸಂಖ್ಯೆ ತೀರಾ ಕಡಿಮೆಯೆಂದು ಈಗ ಮನದಟ್ಟಾಗಿರಬಹುದು.ಇಂತಹ ಸನ್ನಿವೇಶದಲ್ಲಿ ರವಿಶಂಕರ್ ಅವರ ತೋರಿಕೆಯ ಮುಗುಳ್ನಗು ಪ್ರಯೋಜನಕ್ಕೆ ಬರಬಹುದು. ಬಹುಶಃ ಮಲ್ಯ ಕೂಡಾ ಈ ನಗುವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಅವರ ಲಜ್ಡೆಗೇಡಿತನಕ್ಕೆ ಈ ನಗು ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಸುರೇಶ್ ಮೆನನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...
ಓ ಮೆಣಸೇ...