×
Ad

‘ರೋಹಿತ್ ವೇಮುಲಾ ಬಲಿ: ಜೆಎನ್‌ಯು ಮೇಲೆ ದಾಳಿ’

Update: 2016-03-20 23:25 IST

ಬೆಂಗಳೂರು, ಮಾ. 20: ಹೈದರಾಬಾದ್‌ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಬಲಿ ಮತ್ತು ಜೆಎನ್‌ಯು ಮೇಲೆ ದಾಳಿ ಏಕೆ? ಎಂಬ ವಿಚಾರದ ಕುರಿತು ಮಾ.21ರಂದು ಸಂಜೆ 4 ಗಂಟೆಗೆ ಇಲ್ಲಿನ ಎಸ್‌ಸಿಎಂ ಹೌಸ್‌ನಲ್ಲಿ ಸಂವಾದ, ಸಾಕ್ಷಚಿತ್ರ ಪ್ರದರ್ಶನ ಹಾಗೂ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಶಯ ಭಾಷಣ ಮಾಡಲಿದ್ದು, ಸಾಹಿತ್ಯ ಅಕಾಡಮಿ ಸದಸ್ಯೆ ಕೆ.ನೀಲಾ, ಹೆದರಾಬಾದ್ ವಿವಿ ವಿದ್ಯಾರ್ಥಿ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಯದರ್ಶಿ ಸಂಜಯ್ ಹೊನ್ನಾಲಗಡ್ಡ ಮಾತನಾಡಲಿದ್ದಾರೆ.

‘ಮೆರಿಟ್‌ನ ಸಾವು’ ಎಂಬ ಸಾಕ್ಷಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಅಲ್ಲದೆ, ‘ಜೆಎನ್‌ಯು ಮೇಲೆ ದಾಳಿ-ಭಾರತದ ಮೇಲೆ ದಾಳಿ’ ಮತ್ತು ‘ಭಗತ್ ಸಿಂಗ್ ಹಾದಿಯಲ್ಲಿ’ ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಸ್‌ಎಫ್‌ಐ, ಡಿವೈಎಫ್‌ಐ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News