ನಾಳೆ ಲೋಹಿಯಾ ಜನ್ಮದಿನಾಚರಣೆ
Update: 2016-03-21 23:42 IST
ಬೆಂಗಳೂರು, ಮಾ. 21: ಸಮಾಜವಾದಿ ಪಾರ್ಟಿ ವತಿಯಿಂದ ದೇಶದ ಶ್ರೇಷ್ಠ ಸಮಾಜವಾದಿ ಚಿಂತಕ ಡಾ.ರಾಮಮನೋಹರ್ ಲೋಹಿಯಾ ಅವರ 106ನೆ ಜನ್ಮ ದಿನಾಚರಣೆಯನ್ನು ಮಾ.23ರಂದು ಬೆಳಗ್ಗೆ 10:30ಕ್ಕೆ ಇಲ್ಲಿನ ಗಾಂಧಿನಗರದ ಸಮಾಜವಾದಿ ಪಕ್ಷದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜವಾದಿ ಚಿಂತಕ ಮಂಗ್ಳೂರು ವಿಜಯ, ಡಾ.ನಟರಾಜ ಹುಳಿಯಾರ್, ಅಖಿಲಾ, ಸಮಾಜವಾದಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ರೋಬಿನ್ ಮ್ಯಾಥ್ಯೂಸ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಅಂದು ಸಮಾಜವಾದಿ ಚಿಂತಕ ಡಾ.ರಾಮಮನೋಹರ್ ಲೋಹಿಯಾ ಅವರ ಕುರಿತು ವಿಷಯ ಮಂಡಿಸಲಾಗುವುದೆಂದು ಪಾರ್ಟಿಯ ರಾಜ್ಯ ಯುವ ಘಟಕದ ಉಪಾಧ್ಯಕ್ಷ ವಿ.ಆರ್.ಹರ್ಷಗೌಡ ಹೇಳಿದ್ದಾರೆ.