ಕನಕ ಅಭಿವ್ಯಕ್ತಿ ಮಾಧ್ಯಮ ಸ್ಪಂದನ
ಬೆಂಗಳೂರು, ಮಾ. 21: ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಮಾಧ್ಯಮ ಅಕಾಡಮಿ ಹಾಗೂ ಭಾರತೀಯ ವಿದ್ಯಾ ಭವನದ ಆಶ್ರಯದಲ್ಲಿ ಮಾ.22ರಂದು ಬೆಳಗ್ಗೆ 10:30ಕ್ಕೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಕನಕ ಅಭಿವ್ಯಕ್ತಿ ಮಾಧ್ಯಮ ಸ್ಪಂದನ ಎಂಬ ವಿಷಯದ ಮೇಲೆ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸಿದೆ.
ಸಂಕಿರಣದಲ್ಲಿ ಎರಡು ಗೋಷ್ಠಿಗಳು ನಡೆಯಲಿದ್ದು, ಮೊದಲನೆಯ ಗೋಷ್ಠಿಯಲ್ಲಿ ಕನಕದಾಸರ ಅಭಿವ್ಯಕ್ತಿ ಮತ್ತು ಇಂದಿನ ಮಾಧ್ಯಮಗಳ ಅಭಿವ್ಯಕ್ತಿಯ ಸವಾಲುಗಳು ಎಂಬವಿಷಯದ ಬಗ್ಗೆ ವಿದ್ವಾಂಸ ಜೆ.ಎನ್.ರಂಗನಾಥ್ ರಾವ್ ವಿಷಯವನ್ನು ಮಂಡಿಸಲಿದ್ದು, ಈ ವಿಷಯದ ಬಗ್ಗೆ ಲಕ್ಷ್ಮಣ ಕೊಡಸೆ, ಡಾ.ಆರ್.ಪೂರ್ಣಿಮಾ, ಸುಬ್ಬು ಹೊಲೆಯಾರ್, ಭಾಷಾ ಗುಳ್ಯಂ ಹಾಗೂ ಮಂಜುನಾಥ ಅದ್ದೆ ಇವರುಗಳು ಪ್ರತಿಕ್ರಿಯೆ ನೀಡಲಿದ್ದಾರೆ.
ಎರಡನೆ ಗೋಷ್ಠಿಯಲ್ಲಿ ಧಾರ್ಮಿಕ ಸಹಿಷ್ಣುತೆಯ ಸವಾಲುಗಳು: ಕನಕದಾಸರ ಚಿಂತನೆಗಳು ಎಂಬ ವಿಷಯದ ಬಗ್ಗೆ ವಿದ್ವಾಂಸ ಡಾ.ಕೆ.ವೈ.ನಾರಾಯಣಸ್ವಾಮಿ ವಿಷಯ ಮಂಡಿಸಲಿದ್ದು, ಈ ವಿಷಯದ ಬಗ್ಗೆ ಪತ್ರಕರ್ತರಾದ ಜೋಗಿ, ಗಂಗಾಧರ ಮೊದಲಿಯಾರ್, ಎಸ್.ಆರ್.ಆರಾಧ್ಯ, ಸದಾಶಿವ ಶೆಣೈ ಹಾಗೂ ಡಾ.ಕೆ.ಶರೀಫಾ ಇವರು ಪ್ರತಿಕ್ರಿಯೆ ನೀಡಲಿದ್ದಾರೆ. ಈ ಸಂಕಿರಣ ಉದ್ಫಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಎಸ್.ಚೆನ್ನಪ್ಪ ಗೌಡ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.