ಕೈಗೆಟಕುವ ಬೆಲೆಗೆ ಸಿಗುವ iPhone-SE ಬಿಡುಗಡೆ

Update: 2016-03-22 03:03 GMT

ಹೊಸದಿಲ್ಲಿ, ಮಾ.22: ಆಪಲ್ ಸಂಸ್ಥೆಯ ಕ್ಯಾಲಿಫೋರ್ನಿಯಾ ಕೇಂದ್ರ ಕಚೇರಿಯಲ್ಲಿ ಸೋಮವಾರ ಹೊಸ ಸರಣಿಯ ಐಫೋನ್ ಎಸ್‌ಇ ಬಿಡುಗಡೆ ಮಾಡಲಾಯಿತು.

ಹಳೆಯ ಐಫೋನ್ 5 ಎಸ್ ಮಾದರಿಯ ಸುಧಾರಿತ ರೂಪ ಇದಾಗಿದ್ದು, 16 ಜಿಬಿ ಸಂಗ್ರಹ ಸಾಮರ್ಥ್ಯದ ಮೊಬೈಲ್‌ಗೆ 399 ಡಾಲರ್ ಹಾಗೂ 64 ಜಿಬಿ ಸಾಮರ್ಥ್ಯದ ಮೊಬೈಲ್‌ಗೆ 499 ಡಾಲರ್ ದರ ನಿಗದಿಪಡಿಸಲಾಗಿದೆ ಎಂದು ಸಂಸ್ಥೆ ಪ್ರಕಟಿಸಿದೆ.


ಈ ಹೊಸ ಐಫೋನ್ 64 ಬಿಟ್ ಎ9 ಚಿಪ್ ಹೊಂದಿದ್ದು, ಇದು ವೋಲ್ಟೆ, ವೈಫೈ, ಬ್ಲೂಟೂತ್‌ಗಳ ಕ್ಷಿಪ್ರ ಕಾರ್ಯನಿರ್ವಹಣೆಗೆ ಪೂರಕವಾಗಿದೆ. ಅತ್ಯಾಧುನಿಕ ಐಓಎಸ್ 9.3 ಕೂಡಾ ಇದರಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಕಸ್ ಪಿಕ್ಸೆಲ್, ರೆಟಿನಾ ಫ್ಲ್ಯಾಶ್, ಲೈವ್ ಫೋಟೊ ವ್ಯವಸ್ಥೆ ಹೊಂದಿದ 12 ಎಂಪಿ ಐ ಸೈಟ್ ಕ್ಯಾಮೆರಾ, 4 ಕೆ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ.


ಭಾರತದ ಮಾರುಕಟ್ಟೆಗೆ ಇದು ಏಪ್ರಿಲ್‌ನಲ್ಲಿ ಪ್ರವೇಶಿಸಲಿದ್ದು, 30 ರಿಂದ 36 ಸಾವಿರ ರೂಪಾಯಿ ದರಕ್ಕೆ ಗ್ರಾಹಕರಿಗೆ ಲಭ್ಯವಾಗಲಿದೆ. ಬೇರೆ 110 ದೇಶಗಳಲ್ಲಿ ಮೇ ತಿಂಗಳ ವೇಳೆಗೆ ಇದು ಲಭ್ಯ.


ನಾಲ್ಕು ಇಂಚು ಸ್ಕ್ರೀನ್‌ನ ಮೊಬೈಲನ್ನು ಎರಡೂವರೆ ವರ್ಷ ಅಂತರದ ಬಳಿಕ ಆಪಲ್ ಮತ್ತೆ ಪರಿಚಯಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News