ಕೆಎಸ್ಸಾರ್ಟಿಸಿಗೆ ‘ಎಎಸ್‌ಆರ್‌ಟಿಯು-ಎಕ್ಸಲೆನ್ಸ್’ ಪ್ರಶಸ್ತಿ ಪ್ರದಾನ
Update: 2016-03-22 23:49 IST
ಬೆಂಗಳೂರು, ಮಾ. 22: ಹೊಸದಿಲ್ಲಿಯ ದೇಶದ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಒಕ್ಕೂಟದ ‘ಎಎಸ್‌ಆರ್‌ಟಿಯು-ಎಕ್ಸಲೆನ್ಸ್ ಪ್ರಶಸ್ತಿ 2016’ಯನ್ನು ಕೆಎಸ್ಸಾರ್ಟಿಸಿ ಸಂಸ್ಥೆಗೆ ಪ್ರದಾನಿಸಲಾಯಿತು.
ಪರಿಸರ ನಿರ್ವಹಣೆ ಹಾಗೂ ಪರ್ಯಾಯ ಇಂಧನಗಳ ಬಳಕೆಯಲ್ಲಿ ಅತ್ಯುತ್ತಮ ನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಕೆಎರ್ಸ್ಸಾಟಿಸಿಗೆ ಪ್ರಶಸ್ತಿ ಪ್ರದಾನಿಸಲಾಗಿದ್ದು, ಇದು ಎರಡನೆಯ ಪ್ರಶಸ್ತಿಯಾಗಿದೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್‌ಜಾಧವ್, ನ್ಯಾಟ್ರಿಪ್ ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಒಕ್ಕೂಟದ ಉಪಾಧ್ಯಕ್ಷ ಪಂಕಜ್ ಕುಮಾರ್, ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ರಾಜೇಂದರ್ ಕುಮಾರ ಕಟಾರಿಯ, ಕೆಎರ್ಸ್ಸಾಟಿಸಿ ಕಾರ್ಯ ನಿರ್ವಾಹಕ ಪಿ.ಎಸ್.ಆನಂದ್ ರಾವ್ ಸೇರಿ ಪ್ರಮುಖರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.