×
Ad

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಬಯೋ ಡೀಸೆಲ್ ಬಳಕೆ

Update: 2016-03-22 23:51 IST

ಬೆಂಗಳೂರು, ಮಾ.22: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಅಂತರರಾಜ್ಯ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಶೇ.100ರಷ್ಟು ಬಯೋ ಡೀಸೆಲ್ ಬಳಕೆ ಮಾಡಲು(ಉಚಿತ ಪ್ರಾಯೋಗಿಕ ಚಾಲನೆಗೆೆ) ಸ್ಕಾನಿಯಾ ಕಂಪೆನಿಯವರು ಕೆಎಸ್ಸಾರ್ಟಿಸಿಗೆ ಒದಗಿಸಿದ್ದಾರೆ. ಶೇ.100ರ ಬಯೋ ಡೀಸೆಲ್ ಐರಾವತ ಡೈಮಂಡ್ ಕ್ಲಾಸ್ ಬಸ್‌ನ್ನು ಕೆಎಸ್ಸಾರ್ಟಿಸಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಭಯ್ ದಾಮಲೆ, ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಇ.ರಮಣರೆಡ್ಡಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News