ಹುತಾತ್ಮರ ಬಲಿದಾನಕ್ಕಿಂತ, ಬಣ್ಣ ಎರಚುವ ಸಂಭ್ರಮವೇ ದೊಡ್ಡದಾಯ್ತಲ್ಲ... ಇವರ ದೇಶಪ್ರೇಮದ ಮುಸುಡಿಗಿಷ್ಟು ಮಣ್ಣು ಬೀಳಲಿ..

Update: 2016-03-23 06:26 GMT

" ವ್ಯಾಲಂಟೈನ್ಸ್ ಡೇ " ದಿನ ಎಲ್ಲರ ಮೊಬೈಲಿಗೂ ಒಂದು ಮೆಸೇಜ್ ಬಂದಿರುತ್ತೆ. ಇವತ್ತು ಸ್ವಾತಂತ್ರ್ಯಯೋಧ ಭಗತ್ ಸಿಂಗ್ ನೇಣಿಗೇರಿದ ದಿನ, ಪ್ರೇಮಿಗಳ ದಿನ ಆಚರಣೆ ಮಾಡಿ ಆ ದಿವ್ಯಚೇತನಕ್ಕೆ ಅಪಮಾನ ಎಸಗಬೇಡಿ ಅಂತಿರುತ್ತೆ ಮೆಸೇಜು. 

ವಾಸ್ತವ ಅಂದ್ರೆ ಭಗತ್ ಸಿಂಗ್ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ದಿನ ಮಾರ್ಚ್ 23.

ಈ ಮೂವರು ವೀರ ಸ್ವಾತಂತ್ರ್ಯ ಸೇನಾನಿಗಳನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿದ ದಿನ ಇವತ್ತು. ಶೋಕಾಚರಣೆಯಲ್ಲಿ ಪಾಲ್ಗೊಂಡು ಆ ಮೂವರು ವೀರರಿಗೆ ನಮನ ಸಲ್ಲಿಸುವ ಬದಲು ದೇಶವೆಲ್ಲ ಒಬ್ಬರ ಮುಖಕ್ಕೊಬ್ಬರು ಬಣ್ಣ ಎರಚಿಕೊಂಡು ಆನಂದ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಇವತ್ತು ಭಗತ್ ನೇಣಿಗೇರಿದ ದಿನ.. ನಮಗೋಸ್ಕರ ಹುತಾತ್ಮರಾದ ಶೋಕದ ದಿನ.. ಇವತ್ತು ಯಾರೂ ಹೋಳಿ ಆಚರಿಸಬೇಡಿ ಅಂತ ಯಾರಿಗೂ ಒಂದು ಮೆಸೇಜ್ ಬಂದಿಲ್ಲ.. ಯಾರೊಬ್ಬರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಇವರ ಡಬಲ್ ಸ್ಟಾಂಡರ್ಡ್ ಮುಖವಾಡಗಳು ಹೇಗಿರ್ತವೆ ನೋಡಿ. ಧರ್ಮದ ಆಚರಣೆ ವಿಷ್ಯ ಬಂದಾಗ ಆರಾಮಾಗಿ ಸ್ವಾತಂತ್ರ್ಯ ಯೋಧರನ್ನ ಸೈಡಿಗಿಟ್ಟುಬಿಡ್ತಾರೆ. ವ್ಯಾಲಂಟೈನ್ ಡೇ ದಿನ ಊರಿಗೆಲ್ಲ ದೇಶಪ್ರೇಮದ ಪುಂಗಿ ಊದ್ತಾರೆ.

ನಮಗೋಸ್ಕರ ಜೀವವನ್ನೇ ಬಲಿಕೊಟ್ಟ ಭಗತ್ ಸಿಂಗ್, ರಾಜಗುರು, ಸುಖದೇವ್ ರ ಬಲಿದಾನಕ್ಕಿಂತ, ನಮ್ಮ ದೇಶಭಕ್ತರಿಗೆ ಬಣ್ಣ ಎರಚುವ ಸಂಭ್ರಮವೇ ದೊಡ್ಡದಾಯ್ತಲ್ಲ.. ಇವರ ದೇಶಪ್ರೇಮದ ಮುಸುಡಿಗಿಷ್ಟು ಮಣ್ಣು ಬೀಳಲಿ. ಇವರ ಸತ್ತ ಮೆದುಳಿನ ಆತ್ಮಕ್ಕೆ ಶಾಂತಿ ಸಿಗಲಿ..

ಭಗತ್ ಸಿಂಗ್, ರಾಜಗುರು, ಸುಖದೇವರ ಬಲಿದಾನ ಯಾವತ್ತೂ ನಮ್ಮ ನೆನಪಿನಲ್ಲಿ ಉಳಿಯಲಿ.

Writer - ಟಿ. ಕೆ. ದಯಾನಂದ್

contributor

Editor - ಟಿ. ಕೆ. ದಯಾನಂದ್

contributor

Similar News