ಬಿಂಗಿಪುರದಲ್ಲಿ ಮತ್ತೆ ಬೆಂಕಿ..!

Update: 2016-04-04 18:19 GMT

ಕೆಲ ತಿಂಗಳ ಹಿಂದೆ ಕಸದ ಸಮಸ್ಯೆಯಿಂದ ಬೆಂಕಿ ಹೊತ್ತ್ತಿಕೊಂಡು ಬೆಚ್ಚಿಬೀಳಿಸಿದ್ದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಹೊಂದಿಕೊಂಡಿರುವ ಎಸ್.ಬಿಂಗಿಪುರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಇಲ್ಲಿನ ಜನರ ಬದುಕಿಗೆ ಮತ್ತೆ ಬೆಂಕಿ ಬೀಳುವ ಸಾಧ್ಯತೆ ದಟ್ಟವಾಗಿದೆ. ಬಿಸಿಲ ಬೇಗೆ ಬೇರೆ. ಅದರ ಮಧ್ಯೆ ಇಲ್ಲಿ ಬೆಂಕಿಯ ಜ್ವಾಲೆ ಜೋರಾಗಿದೆ. 5 ವರ್ಷಗಳ ಹಿಂದೆ ಡಂಪಿಂಗ್ ಯಾರ್ಡ್ ಸ್ಥಾಪಿಸಲಾಗಿತ್ತಾದರೂ ಗ್ರಾಮಸ್ಥರ ವಿರೋಧದಿಂದಾಗಿ ಕಸ ಸುರಿಯುವುದನ್ನು 6 ತಿಂಗಳ ಹಿಂದೆ ನಿಲ್ಲಿಸಲಾಗಿತ್ತು. ಆದರೂ ಮಳೆ ನಿಂತರೂ ಹನಿ ನಿಲ್ಲಲಿಲ್ಲ ಅಂತಾರಲ್ವಾ ಹಾಗೆ ಬಿಂಗಿಪುರದಲ್ಲೀಗ ಕಸದ ರಾಶಿಯ ಮಧ್ಯೆ ಹೊಗೆ ಬರುತ್ತಿದೆ. ಸುತ್ತ -ಮುತ್ತಲಿನ ಜಲಮೂಲವಂತೂ ಕಲುಷಿತಗೊಂಡಿದೆ. ನಡೆದಾಡುವಾಗ ಬರುವ ದುರ್ನಾತ ವಾಂತಿ ಮಾಡಿಕೊಳ್ಳುವಂತೆ ಮಾಡುತ್ತದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ಈಗಲೂ ಮಿಥೇನ್ ಅನಿಲ, ಬೆಂಕಿ ಜ್ವಾಲೆ ಇದೆ. ಆದರೆ ಬಿಬಿಎಂಪಿ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೂಡಲೇ ಬಿಬಿಎಂಪಿ ಬಿಂಗಿಪುರದ ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಮತ್ತೆ ದೊಡ್ಡ ಮಟ್ಟದಲ್ಲಿ ಬಿಂಗಿಪುರಕ್ಕೆ ಬೆಂಕಿ ಬೀಳೋದು ಗ್ಯಾರಂಟಿ.

Similar News