×
Ad

ಬೆಂಗಳೂರು.ಏ.11: ರಾಜ್ಯ ಸಚಿವ ಸಂಪುಟ ಪುನರ್ ರಚನೆ,ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ

Update: 2016-04-11 18:05 IST

ಬೆಂಗಳೂರು.ಏ.11: ರಾಜ್ಯ ಸಚಿವ ಸಂಪುಟ ಪುನಾರಚನೆ,ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ,80ಕ್ಕೂ
ಹೆಚ್ಚು ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ತಿಂಗಳ 16 ರಂದು ದೆಹಲಿಗೆ ತೆರಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ: ಜಿ. ಪರಮೇಶ್ವರ್ ಸಹ ದಿಲ್ಲಿಯಾತ್ರೆ ಕೈಗೊಳ್ಳಲಿದ್ದು, ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಜತೆ ಚ
ರ್ಚೆ ನಡೆಸಲಿದ್ದಾರೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕು ಎಂಬ ಪ್ರಸ್ತಾವವನ್ನು ಗೃಹ ಸಚಿವರೂ ಆಗಿ ರುವ ಡಾ॥ಎಂಬ ಕುರಿತೂ ವರಿಷ್ಟರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ 
ಾಗೂ ಪರಮೇಶ್ವರ್ ಚರ್ಚೆ ನಡೆಸಲಿದ್ದಾರೆ. ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಮೇ 15 ರಿಂದ 20ರ ಒಳಗಾಗಿ ಕೈಗೊಳ್ಳಲು ಹೈಕಮಾಂಡ್ ಉದ್ದೇಶಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಇರುವುದರಿಂದ ಮೇ 15 ರ ತನಕ ಸಚಿವ ಸಂಪುಟ ಪುನಾರಚನೆ ಬೇಡ ಎಂಬುದು ಹೈಕಮಾಂಡ್ ಸ್ಪಷ್ಟ ಮಾತು.
ಆದರೆ ಪಕ್ಷದಲ್ಲಿ ಸಂಪುಟ ಪುನಾರಚನೆಗೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವರಿಷ್ಟರಿಗೆ ವಸ್ತುಸ್ಥಿತಿಯನ್ನು ವಿವರಿಸಿ ಬರುವುದು ಸಿದ್ಧರಾಮಯ್ಯ ಅವರ ಉದ್ದೇಶವಾಗಿದೆ. ರಾಜ್ಯ ಕಾಂಗ್ರೆಸ್‌ನ ಸಮಾನ ಮನಸ್ಕ ಶಾಸಕರು 25 ಸಚಿವರ ತಲೆದಂಡಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಹತ್ತರಿಂದ ಹನ್ನೆರಡು ಮಂದಿಯನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು.ಅಷ್ಟೇ ಸಂಖ್ಯೆಯಲ್ಲಿ ಪ್ರಬಲರಿಗೆ ಅವಕಾಶ ನೀಡಿ ಸರ್ಕಾರದ ವರ್ಚಸ್ಸು ಹೆ
ಚ್ಚುವಂತೆ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದಾರೆ. ಈ ಮಧ್ಯೆ ರಾಜ್ಯದ ಎಂಭತ್ತೆರಡು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಿಸಿ,ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ತೀರ್ಮಾನ ಈ ಹಿಂದೆಯೇ ಆಗಿದ್ದು ಇದಕ್ಕೆ ಪೂರಕವಾಗಿ ನೂತನ ಅಧ್ಯಕ್ಷರು ಅಥವಾ ಉಪಾಧ್ಯಕ್ಷರ ಪಟ್ಟಿಯನ್ನು ಸಿದ್ಧರಾಮಯ್ಯ ಹಾಗೂ ಪರಮೇಶ್ವರ್ ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ.
ಹೀಗೆ ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ನೂತನವಾಗಿ ರಚಿಸಿರುವ ಅಧ್ಯಕ್ಷರ ಪಟ್ಟಿಯನ್ನು ವರಿಷ್ಟರ ಮುಂದಿಟ್ಟು ಮುಂದಿನ ತಿಂಗಳ ವೇಳೆಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ನಿರ್ಧರಿಸಲಾಗಿದೆ ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News