×
Ad

ಬೆಂಗಳೂರು : ಅಧಿಕಾರ ಸ್ವೀಕರಿಸಿ ಮೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಸಾಧನಾ ಸಮಾವೇಶ

Update: 2016-04-11 18:07 IST

ಬೆಂಗಳೂರು.ಏ.11: ಮೇ 13 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅಂದು ಬೃಹತ್ ಸಾಧನಾ ಸಮಾವೇಶ ನಡೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ನಂತರ ಎರಡು ವರ್ಷಗಳ ಕಾಲ ಸರ್ಕಾರವನ್ನು ಮತ್ತಷ್ಟು ಪರಿಣಾಮಕಾರಿಯಾಗುವಂತೆ ಮಾಡಿ, ಮುಂದಿನ 2018ರ ವಿಧಾನಸಭೆಗೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಿದ್ದಾರೆ. ಬೆಂಗಳೂರು,ಮೈಸೂರು,ಚಿತ್ರದುರ್ಗ. ದಾವಣಗೆರೆ ಪೈಕಿ ಒಂದು ಕಡೆಯಲ್ಲಿ ಸಾದನಾ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಬಿಜೆಪಿಯ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ 

ೇಮಕಗೊಂಡಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಸಿದ್ದರಾಮಯ್ಯ ಮುಂದಾಗಿದ್ದು, ಕಾಂಗ್ರೆಸ್‌ನ ಅತಿರಥ ಮಹಾರಥರನ್ನು ಕರೆಸಿ ಸಮಾವೇಶ ಆಯೋಜಿಸಲು ಮುಂದಾಗಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ನಾಯಕರಾಗಿರುವಮಲ್ಲಿಕಾರ್ಜುನ ಖರ್ಗೆ,ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ,ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಸೇರಿದಂತೆ ಪ್ರಮುಖ ನಾಂ
ುಕರನ್ನು ಸಮಾವೇಶಕ್ಕೆ ಕರೆತರಲು ಉದ್ದೇಶಿಸಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಯಡಿಯೂರಪ್ಪ ನೇಮಕಗೊಂಡನಂಗತರ ಪ್ರಬಲ ಲಿಂಗಾ
ಯತ ಸಮುದಾಯ ಬಿಜೆಪಿ ಪರ ವಾಲುವ ಸಾಧ್ಯತೆ ಹೆಚ್ಚಾಗಿದೆ. ಜತೆಗೆ ಅಸಮಾಧಾನಗೊಂಡಿರುವ ಇತರ ಜನ ಸಮುದಾಯಗಳು ಕೂಡ ಬಿಜೆಪಿ ಜತೆ ಕೈಜೋಡಿಸಿದರೆ ಕಷ್ಟವಾಗುತ್ತದೆ. ಹೀಗಾಗಿ ಬಲ ಪ್ರದರ್ಶನದ ಮೂಲಕ ಸರ್ಕಾರವನ್ನು ಗಟ್ಟಿಗೊಳಿಸಿ ಪಕ್ಷ ಸಂಘಟನೆಗೆ ಆದ್ಯತೆ ಕಲ್ಪಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸರ್ಕಾರಕ್ಕೆ ಮೂರು ವರ್ಷ ತುಂಬುವ ಸಂದರ್ಭವನ್ನು ಸರಳವಾಗಿ ಆಚರಿಸಬೇಕು ಎಂದು ತೀರ್ಮಾನಿಸಲಾಗಿತ್ತಾದರೂ ಇವತ್ತಿನ ಸನ್ನಿವೇಶದಲ್ಲಿ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸದಿದ್ದರೆ ಪರಿಸ್ಥಿತಿ ಕಷ್ಟಕರವಾಗಬಹುದು ಎಂದು ಮುಖ್ಯಮಂತ್ರಿಆಪ್ತ ವಲಯ ಸಲಹೆ ನೀಡಿದೆ ಎಂದು ಉನ್ನತ ಮೂಲಗಳು ವಿವರಿಸಿವೆ.
ಈ ಹಿಂದೆ ಜನತಾ ಪರಿವಾರ ಅನುಸರಿಸುತ್ತಿದ್ದ ತಂತ್ರಗಾರಿಕೆಯನ್ನೇ ನಾವು ಅನುಸರಿಸಬೇಕು.ಎಲ್ಲ ನಾಯಕರೂ ಪರಸ್ಪರ ಒಗ್ಗಟ್ಟಿನಿಂದಿದ್ದಾರೆ ಎಂಬ ಸಂದೇಶ ರವಾನೆಯಾಗುವಂತೆ ಮಾಡಬೇಕು ಎಂಬುದು ಸಿಎಂ ಆಪ್ತ ವಲಯದ ಸಲಹೆ.
ಹಿಂದೆ ಜನತಾ ಪರಿವಾರದ ನಾಯಕರಾದ ದೇವೇಗೌಡ,ರಾಮಕೃಷ್ಣ ಹೆಗಡೆ,ಜೆ.ಹೆಚ್.ಪಟೇಲ್,ಎಸ್.ಆರ್.ಬೊಮ್ಮಾಯಿ,ಡಿ.ಮಂಜುನಾಥ್,ಸಿ.ಎಂ.ಇಬ್ರಾಹಿಂ,ಸಿಂಧ್ಯಾ,ಸಿದ್ಧರಾಮಯ್ಯ,ರಮೇಶ್ ಜಿಗಜಿಣಗಿ ಹಾಗೂ ಆರ್.ಎಲ್.ಜಾಲಪ್ಪ ಸೇರಿದಂತೆ ಪ್ರಮುಖ ನಾಯಕರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡು ರಾಜ್ಯದ ಜನರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದರು.
ಅಂತಹ ಕೆಲಸವನ್ನೇ ನಾವೀಗ ಮಾಡೋಣ.ಆ ಮೂಲಕ ಈಗಾಗಲೇ ಅಧಿಕಾರಕ್ಕೆ ಬಂದಂತೆ ಉತ್ಸಾಹ ಪ್ರದರ್ಶಿಸುತ್ತಿರುವ ಬಿಜೆಪಿಗೆ ತಕ್ಕ ಉತ್ತರ ನೀಡೋಣ ಎಂದು ಸಿಎಂ ಆಪ್ತ ವಲಯ ಸಲಹೆ ನೀಡಿದ್ದು.ಇದನ್ನು ಅನುಷ್ಟಾನಗೊಳಿಸಲು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
ಪಕ್ಷದಲ್ಲಿರುವ ದಲಿತ ಸಿಎಂ ವಿವಾದ ಸೇರಿದಂತೆ ವಿವಾದಕ್ಕೆ ಕಾರಣವಾಗಿರುವ ಹಲವಾರು ಅಂಶಗಳಿಗೆ ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾದ ಸಂದರ್ಭದಲ್ಲಿ ಉತ್ತರ ನೀಡುವ ಮೂಲಕ ಸರ್ಕಾರದ ವರ್ಚಸ್ಸನ್ನು ಮತ್ತೆ ಬಲಿಷ್ಟಗೊಳಿಸುವ ಯೋಚನೆ ಸಿದ್ಧರಾಮಯ್ಯ ಅವರದು ಎಂದು ಮೂಲಗಳು ವಿವರ ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News