ಭಿವಂಡಿಯಲ್ಲಿ ಭೀಕರ ಅಗ್ನಿ ದುರಂತ

Update: 2016-04-12 04:47 GMT

ಮುಂಬೈ, ಎ.12: ಭಿವಂಡಿಯ ನಾಲ್ಕು ಅಂತಸ್ತುಗಳ ಕಟ್ಟಡವೊಂದರಲ್ಲಿ ಉಂಟಾಗಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಹರಸಾಹಸ ಪಡುತ್ತಿದ್ದಾರೆ. ಕಟ್ಟಡದಲ್ಲಿ ಸುಮಾರು 30ಕ್ಕೂ ಅಧಿಕ ಮಂದಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದು, ಇನ್ನೂ 50ಕ್ಕೂ ಅಧಿಕ ಮಂದಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಭಿವಂಡಿಯ ಕಾಸಿಮ್‌ಪುರದಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡದ ತಳ ಅಂತಸ್ತಿನಲ್ಲಿರುವ ಗಾಮೆಂಟ್ಸ್ ಫ್ಯಾಕ್ಟರಿಯಲ್ಲಿ ಈ ಅಗ್ನಿ ಅನಾಹುತ ಸಂಭವಿಸಿದ್ದು, ಬೆಂಕಿಯೂ ಕಟ್ಟಡದಾದ್ಯಂತ ವ್ಯಾಪಿಸಿದೆ. ಭಾರೀ ಬೆಂಕಿ ಹಾಗೂ ಪರಿಸರವಿಡೀ ಹೊಗೆಯಿಂದ ಆವರಿಸಿದೆ. 12 ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸಲು ಶ್ರಮಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News