ಮೋನಪ್ಪ

Update: 2016-04-26 18:39 GMT

ಉಪ್ಪಿನಂಗಡಿ, ಎ.26: ದೈವ ನರ್ತಕ ಬಜತ್ತೂರು ಗ್ರಾಮದ ಕುಡ್ತಡ್ಕ ಮನೆಯ ಮೋನಪ್ಪ(31) ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸೋಮವಾರ ಬೆಳಗ್ಗೆ ಮೋನಪ್ಪರಿಗೆ ಎದೆ ನೋವು ಹಾಗೂ ಉಬ್ಬಸ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಖ್ಯಾತ ದೈವನರ್ತಕನಾಗಿರುವ ಸುಬ್ಬಣ್ಣ ನಲ್ಕೆಯವರ ಪುತ್ರರಾದ ಮೋನಪ್ಪರು ಸಣ್ಣ ಹರೆಯದಲ್ಲೇ ದೈವ ನರ್ತಕರಾಗಿ ಪ್ರಸಿದ್ಧಿ ಪಡೆದಿದ್ದರು. ಮೃತರು ಪತ್ನಿ, ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ