×
Ad

ಸೌದಿ ಅರೇಬಿಯಾ : ಬಂಗ್ಲೆಗುಡ್ಡೆ ಕೆ.ಟಿ ಇಬ್ರಾಹಿಂ ನಿಧನ

Update: 2024-04-12 15:26 IST

ಕಾರ್ಕಳ:  ಬಂಗ್ಲೆಗುಡ್ಡೆ ನಿವಾಸಿ ಕೆ.ಟಿ ಇಬ್ರಾಹಿಂ ( 50) ಇಂದು ಮುಂಜಾನೆ 5.00 ಗಂಟೆ ಸುಮಾರಿಗೆ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಕಂಪ್ಯೂಟರ್ ಇಬ್ರಾಹಿಂ ಎಂದೆ ಹೆಸರುವಾಸಿಯಾಗಿದ್ದ ಇವರು  ಮೂಲತಃ ಕೊಪ್ಪ ತಾಲೂಕಿನ ತೆಂಗಿನಮನೆ ನಿವಾಸಿಯಾಗಿದ್ದರು. ಕಂಪ್ಯೂಟರ್ ಇಂಜಿನಿಯರ್ ಪದವೀಧರನಾಗಿದ್ದ ಇವರು, ಚಿಕ್ಕಮಗಳೂರು ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ಕಳೆದ 29 ವರ್ಷದಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿಮಿತ್ತ ನೆಲೆಸಿದ್ದ ಇಬ್ರಾಹಿಂ, ಜಮೀಯತುಲ್ ಫಲಾಹ್ ಸೇರಿದಂತೆ ಹಲವಾರು ಧಾರ್ಮಿಕ ಸಂಘಟನೆ ಗಳಲ್ಲಿ ಸಕ್ರಿಯವಾಗಿ ದುಡಿಯುತ್ತಿದ್ದರು.

ಮೃತರು ತಾಯಿ, ಪತ್ನಿ ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News