" ಮುಸ್ಲಿಮರು ಭಯೋತ್ಪಾದಕರು" ಹೇಳಿಕೆ ನಮ್ಮದಲ್ಲ : ಸೋನಿ ಸ್ಪಷ್ಟನೆ

Update: 2016-05-05 06:14 GMT

ಮುಂಬೈ, ಮೇ 5: "ಮುಸ್ಲಿಮರು ಭಯೋತ್ಪಾದಕ ರಾಗಿರುವ ಸಾಧ್ಯತೆ ಇರುವುದರಿಂದ ನಾವು ಅವರನ್ನು ಮಾಡೆಲ್ ಗಳಾಗಿ ತೆಗೆದುಕೊಳ್ಳುವುದಿಲ್ಲ " ಎಂದು ತನ್ನನ್ನು ಸೋನಿ ಮ್ಯೂಸಿಕ್ ನ ಟ್ಯಾಲೆಂಟ್ ಹಂಟ್ ನಿರ್ದೇಶಕಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಇತ್ತೀಚಿಗೆ ನೀಡಿರುವ ಹೇಳಿಕೆ ಬಗ್ಗೆ ಸೋನಿ ಮ್ಯೂಸಿಕ್ ಸೌಥ್ ಸ್ಪಷ್ಟೀಕರಣ ನೀಡಿದೆ. 

"ಆಕ್ಷೇಪಾರ್ಹ ಹೇಳಿಕೆ ನೀಡಿರುವ ರಾಧಿಕಾ ಸೈನಿ ಎಂಬ ಹೆಸರಿನ ಮಹಿಳೆಗೂ ಸೋನಿ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಇದು ತಪ್ಪು ಗುರುತು ಹೇಳಿ ವಂಚಿಸುವ ಸ್ಪಷ್ಟ ನಿದರ್ಶನವಾಗಿದೆ. ನಾವು ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂಬುದನ್ನು ಅತ್ಯಂತ ಗಂಭೀರವಾಗಿ ಪಾಲಿಸುವ ಸಂಸ್ಥೆಯಾಗಿದ್ದು ಇಂತಹ ಪಕ್ಷಪಾತಿ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ " ಎಂದು ಸೋನಿ ಮ್ಯೂಸಿಕ್ ಸೌಥ್  ಹೇಳಿಕೆ ನೀಡಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News