ಬೌದ್ಧ ಧರ್ಮದತ್ತ ದಲಿತರು

Update: 2016-05-05 17:05 GMT

ಮುಂಬೈ, ಮೇ 5: ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಕುಟುಂಬವು ಅಂಬೇಡ್ಕರ್ ಅವರ 125ನೇ ಜನ್ಮದಿನದಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವುದು ದೇಶದ ದಲಿತ ಚಳುವಳಿಯಲ್ಲಿ ನೈತಿಕ ಆಯುಧವಾಗಿ ಬೌದ್ಧ ಧರ್ಮವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆಯೆಂಬುದರ ಸಂಕೇತವಾಗಿದೆ.

ಕೇಂದ್ರ ಸರಕಾರವು ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿ ಸಂಖ್ಯೆಗಳ ಪ್ರಕಾರ ಬೌದ್ಧ ಧರ್ಮ ದೇಶದ ಪರಿಶಿಷ್ಟ ವರ್ಗಗಳ ಜನರಲ್ಲಿ ಜನಪ್ರಿಯವಾಗುತ್ತಿದೆ.
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾನನ್ನು ಹಾಸ್ಟೆಲ್ ನಿಂದ ಹೊರ ಹಾಕಿ ಆತನಿಗೆ ದೊರಕುತ್ತಿದ್ದ ವಿದ್ಯಾರ್ಥಿವೇತನವನ್ನು ನಿಲ್ಲಿಸಿದ ನಂತರ ಆತ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ. ಎಪ್ರಿಲ್ ನಲ್ಲಿ ಆತನ ಕುಟುಂಬ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿತ್ತು. ಆ ನಂತರ ಮಾತನಾಡಿದ ಅತನ ಸಹೋದರ ರಾಜಾ ವೇಮುಲಾ ‘‘ರೋಹಿತ್ ತನ್ನ ಕುಟುಂಬ ಸದಸ್ಯರು ಬುದ್ಧನ ಅನುಯಾಯಿಗಳಾಗಬೇಕೆಂದು ಬಯಸಿದ್ದನು. ನವೆಂಬರ್ 2015 ರಲ್ಲಿ ಆತ ಮನೆಗೆ ಬಂದಿದ್ದಾಗ ಬುದ್ಧನ ಅನುಯಾಯಿಗಳು ಧರಿಸುವ ಬಿಳಿ ಬಟ್ಟೆಗಳನ್ನು ಧರಿಸಿದ್ದ,’’ಎಂದು ಹೇಳಿದ್ದರು.

ಸರಕಾರದ ಅಂಕಿ ಸಂಖ್ಯೆಗಳ ಪ್ರಕಾರ ಪರಿಶಿಷ್ಟ ಜಾತಿಯಲ್ಲಿನ ಬೌದ್ಧ ಧರ್ಮದವರ ಜನಸಂಖ್ಯೆ 2001ರಲ್ಲಿ  41.59 ಲಕ್ಷವಿದ್ದರೆ 2011ರಲ್ಲಿ ಈ ಸಂಖ್ಯೆ 57.66 ಲಕ್ಷಕ್ಕೇರಿತ್ತು. ಇದೇ ಅವಧಿಯಲ್ಲಿ ದೇಶದ ಪರಿಶಿಷ್ಟ ಜಾತಿಗಳ ಒಟ್ಟು ಜನಸಂಖ್ಯೆ 16.6 ಕೋಟಿಯಿಂದ 20.14 ಕೋಟಿಗೇರಿದೆ.

ದೇಶದ ಒಟ್ಟು ದಲಿತ ಜನಸಂಖ್ಯೆಯಲ್ಲಿ ಬೌದ್ಧ ಧರ್ಮದವರ ಪ್ರಮಾಣ 2.83% ಆಗಿದೆ.
ಇದೇ ಅವಧಿಯಲ್ಲಿ ಹಿಂದೂ ಧರ್ಮ ಅನುಯಾಯಿಗಳಾಗಿರುವ ಪರಿಶಿಷ್ಟರ ಜನಸಂಖ್ಯೆ 15.8 ಕೋಟಿಯಿಂದ18.9 ಕೋಟಿಗೆ ಏರಿದ್ದರೆ ಸಿಖ್ ಪಂಥದ ಪರಿಶಿಷ್ಟರ ಸಂಖ್ಯೆ 46.85 ಲಕ್ಷದಿಂದ 59.52 ಲಕ್ಷಕ್ಕೇರಿದೆ.

ಇನ್ನೊಂದು ಗಮನಿಸತಕ್ಕ ಅಂಶವೇನೆಂದರೆ ಬೌದ್ಧ ಧರ್ಮ ಅನುಸರಿಸುವ ಪರಿಶಿಷ್ಟರಲ್ಲಿ 90% ಮಂದಿ ಮಹಾರಾಷ್ಟ್ರದಲ್ಲಿದ್ದಾರೆ. ಈ ರಾಜ್ಯದಲ್ಲಿ ಒಟ್ಟು 52.04 ಲಕ್ಷ ಬೌದ್ಧ ಧರ್ಮ ಅನುಯಾಯಿಗಳಿದ್ದಾರೆ.

ದಲಿತ ಯುವಕರು ಬೌದ್ಧ ಧರ್ವದೊಂದಿಗೆ ತಮ್ಮನ್ನು ಹೆಚ್ಚಾಗಿ ಗುರುತಿಸಿಕೊಳ್ಳ ಬಯಸುತ್ತಿದ್ದಾರೆಂಬುದು ಇತ್ತೀಚಿಗಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ‘‘ದಲಿತ ಯುವಕರಲ್ಲಿ ಬೌದ್ಧ ಧರ್ವದ ಬಗ್ಗತೆ ಹೆಚ್ಚಿನ ಅರಿವು ಉಂಟಾಗಿದೆ,’’ಎಂದು ಬೌದ್ಧ ಧರ್ಮ ಅನುಯಾಯಿಯಾಗಿರುವ ದಲಿತ ಸಾಮಾಜಿಕ ಕಾರ್ಯಕರ್ತ ರಾಹುಲ್ ಸಪ್ಕಲ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News