ಸಿರಿಯಕ್ಕೆ ಭೂಸೇನೆ ಕಳುಹಿಸುವ ವಿಚಾರ ಪರಿಗಣನೆಯಲ್ಲಿದೆ: ಟರ್ಕಿ

Update: 2016-05-05 08:38 GMT

ಇಸ್ತಾಂಬುಲ್, ಮೇ 5: ಅಗತ್ಯ ಎನಿಸಿದರೆ ಸಿರಿಯಕ್ಕೆ ಭೂಸೇನೆಯನ್ನು ಕಳುಹಿಸಲು ಸಿದ್ಧವೆಂದು ಟರ್ಕಿ ಪ್ರಧಾನಿ ಅಹ್ಮದ್ ದಾವೂದ್ ಒಗ್ಲು ತಿಳಿಸಿರುವುದಾಗಿ ವರದಿಯಾಗಿದೆ. ಗಡಿ ಪ್ರದೇಶಗಳಲ್ಲಿ ದಿನೇದಿನೇ ಐಸಿಸ್ ದಾಳಿ ಬಲವರ್ಧನೆಯಾಗುತ್ತಿದೆ. ಆದ್ದರಿಂದಭೂಸೇನೆಯನ್ನು ಕಳುಹಿಸುವ ವಿಚಾರ ಪರಿಗಣಿಸಲು ಟರ್ಕಿ ಸಿದ್ಧವಾಗಿದೆ ಎನ್ನಲಾಗಿದೆ. ಸಿರಿಯದಲ್ಲಿ ಐಸಿಸ್ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ಸಮೀಪವಿರುವ ಕಿಲಿಸ್ ಸಹಿತ ವಲಯದಲ್ಲಿ ಇತ್ತೀಚೆಗೆ ದಾಳಿ ಆಗಿತ್ತು. ಇಲ್ಲಿ ರಾಕೆಟ್ ದಾಳಿಯಿಂದ ಇಪ್ಪತ್ತು ಮಂದಿ ಮೃತರಾಗಿದ್ದರು. ಕೂಡಲೆ ಟರ್ಕಿ ಸೇನೆ ಪ್ರತ್ಯಾಕ್ರಮಣ ನಡೆಸಿದ್ದರೂ ಆಕ್ರಮಣವೇ ನಡೆಯದಂತೆಮಾಡಲು ಭೂಸೇನೆಯನ್ನು ಕಳುಹಿಸುವ ಸಾಧ್ಯತೆಯನ್ನು ಟರ್ಕಿ ಪರೀಕ್ಷಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News