ಪ್ರಧಾನ್‌ಮಂತ್ರಿ ಆವಾಸ್ ಯೋಜನೆ ಯಾಕೆ ವಿಫಲವಾಯಿತು?

Update: 2016-05-05 11:35 GMT

ಹೊಸದಿಲ್ಲಿ, ಮೇ 5 : ಲೋಕಸಭೆಯಲ್ಲಿ ಪ್ರಚಂಡ ಬಹುಮತ ಪಡೆದು ವಿಪಕ್ಷಗಳನ್ನು ಮೂಲೆಗೆ ತಳ್ಳಿರುವ ಬಿಜೆಪಿಗೆ ಈಗ ಸ್ವಪಕ್ಷೀಯರೇ ಸದನದಲ್ಲಿ ತಲೆನೋವಾಗುತ್ತಿದ್ದಾರೆ.

ಇತ್ತೀಚಿಗೆ ಬಿಜೆಪಿಯ ಇಬ್ಬರು ಸಂಸದರು (ಸಿಕಾರ್ ಕ್ಷೇತ್ರದ ಸುಮೇಧಾನಂದ ಸರಸ್ವತಿ ಹಾಗು ಕೈರಾಣ ಕ್ಷೇತ್ರದ ಹುಕುಂ ಸಿಂಗ್ ) ಬೇಳೆ, ಧಾನ್ಯಗಳ ಬೆಲೆ ಗಗನಕ್ಕೇರಿ, ನೀರುಳ್ಳಿಯ ಬೆಲೆ ಪಾತಾಳಕ್ಕಿಳಿದಿದೆ ಎಂದು ಸಂಸತ್ತಿನಲ್ಲಿ ಸರಕಾರದ ಕಿವಿ ಹಿಂಡಿದ್ದರು. ಈಗ ಪಕ್ಷದ ಅಮಾನತುಗೊಂಡ ದರ್ಭಾಂಗ ಕ್ಷೇತ್ರದ ಸಂಸದ ಕೀರ್ತಿ ಆಝಾದ್ ಅವರದ್ದು .

ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡುವ ಯೋಜನೆಗೆ ಪ್ರಧಾನಿ ಹೆಸರಿಟ್ಟ (ಪ್ರಧಾನ್ ಮಂತ್ರಿ ಅವಾಸ್ ಯೋಜನಾ) ಬಳಿಕವೂ ಅದು 5 ಶೇ. ಮಾತ್ರ ಯಶಸ್ವಿಯಾಗಿರುವುದು ಯಾಕೆ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರನ್ನು ಕೀರ್ತಿ ಆಝಾದ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News