×
Ad

ಜೆಡಿಎಸ್ ಅಭ್ಯರ್ಥಿಯ ಗೆಲುವು ನಿಶ್ಚಿತ: ಕುಮಾರ ಸ್ವಾಮಿ

Update: 2016-05-30 15:12 IST

ಬೆಂಗಳೂರು, ಮೇ 30: ಜೆಡಿಎಸ್ ಅಭ್ಯರ್ಥಿ ಫಾರೂಕ್ ನನಗೂ 7-8 ವರ್ಷದ ಸ್ನೇಹಿತ. ಜೆ.ಎಚ್.ಪಟೇಲ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಾನು ಮಂತ್ರಿಯಾಗಿದ್ದವನು. ಹೀಗಾಗಿ ಆ ಪಕ್ಷಕ್ಕೆ ಒಳಿತಾಗಲಿ ಎಂದು ಶಾಸಕ  ಮೊಯ್ದಿನ್ ಬಾವ ಸಲಹೆ ನೀಡಿದ್ದಾರೆ. ಆ ಸಲಹೆ ಮೇರೆಗೆ ಫಾರೂಕ್ ಅವರನ್ನು ಈ ಬಾರಿ ರಾಜ್ಯ ಸಭೆಗೆ ಕಣಕ್ಕಿಳಿಸಿದ್ದೇವೆ ಎಂದು ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಬೆಂಗಳೂರಿನ ವಿಧಾನ ಸೌಧದಲ್ಲಿ ನಾಮ ಪತ್ರ ಸಲ್ಲಿಸಿದ ಬಳಿಕ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾತನಾಡಿದರು.

ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಗೆಲ್ಲುವ ವಿಶ್ವಾಸವಿದೆ. ನನ್ನ ವ್ಯವಹಾರಕ್ಕೂ ನಮ್ಮ ಸಹೋದರನಿಗೂ ಸಂಬಂಧ ಇಲ್ಲ. ರಾಜಕೀಯವಾಗಿ ನಾನು ನನ್ನ ನಿರ್ಧಾರ ಕೈಗೊಂಡಿದ್ದೆನೆ ಎಂದು ಫಾರೂಕ್ ಅವರು ಈ ಸಂದರ್ಭ ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಇರುವ ಕೆಲವು ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಚುನಾವಣೆಯಲ್ಲಿ ಏನಾಗುತ್ತೆ ಗೊತ್ತಾಗುತ್ತೆ. ಜಮೀರ್ ಅಹಮದ್ ಪದೇ ಪದೇ ಗೊಂದಲ ಸೃಷ್ಟಿಸುವ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ವರಿಷ್ಠರಿಗೆ ಬಿಟ್ಟಿದ್ದೇವೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಕಾಲ ಸನ್ನಿಹಿತವಾಗಲಿದೆ ಎಂದು ಜಮೀರ್ ಅಹಮದ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗರಂ ಆದರು.

ಡ್ಯಾನೀಷ್ ಅಲಿಯಿಂದ ರಾಜ್ಯದಲ್ಲಿ ಪಕ್ಷಕ್ಕೆ ಶಕ್ತಿ ಬಂದಿಲ್ಲ. ದೇವೇಗೌಡರ ಜೊತೆ ಮಾತನಾಡಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಸೋನಿಯಾ,  ರಾಹುಲ್ ಗಾಂಧಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ರೆ ಡ್ಯಾನಿಷ್ ಅಲಿಗೆ ಟಿಕೆಟ್ ಕೊಡ್ತಿದ್ವಿ. ಇದನ್ನ ನಾನು ಡ್ಯಾನೀಷ್ ಅಲಿಯವರಿಗೂ ಕೂಡ ಹೇಳಿದ್ದೆ ಎಂದು ಡ್ಯಾನಿಷ್ ಅಲಿ ವಿರುದ್ಧ ಕುಮಾರಸ್ವಾಮಿ ಗುಡುಗಿದರು.

ಪರಿಷತ್ತಿಗೆ ನಾರಾಯಣ ಸ್ವಾಮಿ ಮತ್ತು ವೆಂಕಟಪತಿ ಅಭ್ಯರ್ಥಿಯಾಗಿದ್ದಾರೆ ರಾಜ್ಯಸಭೆಗೆ ಫಾರೂಕ್ ಅಭ್ಯರ್ಥಿಯಾಗಿದ್ದಾರೆ. ಕೆಲ ದಿನದಿಂದ ನಡೆದ ಬೆಳವಣಿಗೆ ಬಗ್ಗೆ ರಿಯಾಕ್ಟ್ ಮಾಡಲ್ಲ ಎಂದರು. ಮುಖ್ಯಮಂತ್ರಿಗಳು ಪಕ್ಷೇತರರ ಜೊತೆ ಏನ್ ನಡೆಸಿದ್ದಾರೆ ಅನ್ನೋದು ಗೊತ್ತಿದೆ. ಎರಡು ತಿಂಗಳ ಹಿಂದೆ ನಮ್ಮ ಅಭ್ಯರ್ಥಿ ಪರವಾಗಿ ರಾಜೀವ್ ಸಹಿ ಹಾಕಿದ್ದಾರೆ. ಆದರೆ ಎರಡು ತಿಂಗಳ ಹಿಂದೆ ಸಹಿ ಹಾಕಿದ್ದಾಗಿ ಹೇಳಿದ್ದಾರೆ. ಎರಡು ತಿಂಗಳ ಹಿಂದೆ ನಾಮಪತ್ರ ಸಿಕ್ಕಿತ್ತಾ ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಐದು ಶಾಸಕರು ಕಾಂಗ್ರೆಸ್ ಗೆ ಬೆಂಬಲ ನೀಡ್ತೇವೆ ಅಂತಾ ಜಮೀರ್ ಅಹಮ್ಮದ್ ಬಹಿರಂಗವಾಗಿ ಹೇಳಿದ್ದಾರೆ. ಉಳಿದವರಾರು ಎಲ್ಲಿಯೂ ಹೇಳಿಲ್ಲ. ಭಿನ್ನರ ವಿರುದ್ಧ ಚುನಾವಣೆ ಬಳಿಕ ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು. 2012 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ರು. ಈ ಚುನಾವಣೆಯಲ್ಲೂ ಕಾಂಗ್ರೆಸ್ ಅದೇ ಸ್ಥಿತಿ ನಿರ್ಮಾಣವಾಗಲಿದೆ ಎಂದರು. 

 ಜೆಡಿಎಸ್ ರಾಜ್ಯಸಭೆ ಮತ್ತು ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಆತ್ಮ ಸಾಕ್ಷಿಗಣುಗುಣವಾಗಿ ಕಾಂಗ್ರೆಸ್ ಶಾಸಕರು ತೀರ್ಮಾನ ಕೈಗೊಳ್ಳಲಿ. ಜೆಡಿಎಸ್ ನವರು ಉದ್ಯಮಿಗಳಿಗೆ, ಸೂಟ್ ಕೇಸ್ ಇರೋರಿಗೆ ಟಿಕೆಟ್ ಕೊಡ್ತಾರೆ ಅಂತಾ ಆರೋಪ ಮಾಡ್ತಾರೆ. ಆದ್ರೆ ಕಾಂಗ್ರೆಸ್ ಮೂರನೇ ಅಭ್ಯರ್ಥಿ ಯಾರು ಹಾಗಾದ್ರೆ ? ನಮ್ಮ ಅಭ್ಯರ್ಥಿಗಳೆಲ್ಲರೂ ಪಕ್ಷದಲ್ಲಿದ್ದವರೆ ಎಂದರು.

 ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ದಿಗ್ವಿಜಯಗಳು ಸಿಂಗ್ ಇಬ್ಬರೂ ಸುಪಾರಿ ಪಡೆದಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಹಾಗೂ ಸಿಎಂ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನ ಇಬ್ಬರು ಅಧಿಕೃತ ಅಭ್ಯರ್ಥಿಗಳು ಯಮಗಂಡ ಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮುಂದೆ ಏನಾಗುತ್ತೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News