ಸೌದಿ : ಜೂನ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಸುಡು ಬಿಸಿಲಿನಲ್ಲಿ ಕೆಲಸಕ್ಕೆ ನಿಷೇಧ

Update: 2016-05-31 07:49 GMT

ಜಿದ್ದಾ, ಮೇ 31: ಜೂನ್ 15ರಿಂದ ಸೆಪ್ಟೆಂಬರ್ 15 ರವರೆಗೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಕಾರ್ಮಿಕರು ಸುಡುಬಿಸಿಲಿನಲ್ಲಿ ಕೆಲಸ ಮಾಡದಂತೆ ಮಾಲಕರು ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಆದೇಶಿಸಿದೆ. ಆದರೆ ಈ ಆದೇಶವು ತೈಲ ಮತ್ತು ಅನಿಲ ಕ್ಷೇತ್ರದ ಕೆಲಸಗಾರರಿಗೆ ಅನ್ವಯಿಸುವುದಿಲ್ಲವಾದರೂ ಅವರನ್ನು ಸುಡು ಬಿಸಿಲಿನಿಂದ ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವಾಲಯದ ಅಧಿಕಾರಿ ಫಹದ್ ಬಿನ್ ಅಬ್ದುಲ್ಲಾ ಅಲ್-ಅವೈದಿ ಹೇಳಿದ್ದಾರೆ.
ಉದ್ಯೋಗಿಗಳು ಕೆಲಸ ನಿರ್ವಹಿಸುವ ವಾತಾವರಣ ಸುರಕ್ಷಿತವಾಗಿರುವಂತೆ, ಅವರಿಗೆ ಯಾವುದೇ ಹಾನಿಯುಂಟಾಗದಂತೆ ಹಾಗೂ ಉತ್ಪಾದನೆಯನ್ನು ಬಾಧಿಸುವಂತಹ ಅಪಘಾತಗಳು ನಡೆಯದಂತೆ ತಡೆಯುವುದೇ ಸಚಿವಾಲಯದ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಉಷ್ಣಾಂಶ ಕಡಿಮೆಯಿರುವ ಸ್ಥಳಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗುವುದು ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News