ಮೋದಿ ಸರಕಾರದ ಸಾಧನೆಗಳನ್ನು ತಿಳಿಸಲು ಮಹಿಳಾ ಪತ್ರಕರ್ತರಿಗೆ ಉಚಿತ ವಿಮಾನ ಟಿಕೇಟು

Update: 2016-05-31 08:40 GMT

ಹೊಸದಿಲ್ಲಿ, ಮೇ 31: ನರೇಂದ್ರ ಮೋದಿ ಸರಕಾರಕ್ಕೆ ಎರಡು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಎಲ್ಲ ಸಚಿವಾಲಯಗಳು ತಮ್ಮ ಯೋಜನೆಗಳ ಪ್ರಚಾರದಲ್ಲಿ ತೊಡಗಿವೆ. ಆದರೆ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ತನ್ನ ಸಚಿವಾಲಯದ ಯೋಜನೆಗಳ ಪ್ರಚಾರಕ್ಕೆ ವ್ಯತ್ಯಸ್ತ ರೀತಿಯನ್ನು ಅನುಸರಿಸಿದ್ದಾರೆ. ಅವರು ಮಹಿಳಾ ಪತ್ರಕರ್ತರನ್ನು ದಿಲ್ಲಿಗೇ ಕರೆಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸಚಿವಾಲಯ ಜೂನ್ ಏಳಕ್ಕೆ ಮೊದಲ ಪತ್ರಿಕಾಗೋಷ್ಠಿಯನ್ನು ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದೆ. ಈ ರೀತಿ ಅವರು ಪ್ರಾದೇಶಿಕ ಮಾಧ್ಯಮಗಳಲ್ಲಿ ತನ್ನ ಸಚಿವಾಲಯದ ಯೋಜನೆಗಳಿಗೆ ಪ್ರಚಾರ ನೀಡಲಿದ್ದಾರೆ. ಹೊರ ರಾಜ್ಯಗಳಿಂದ ಬರುವ ಪತ್ರಕರ್ತರಿಗೆ ಬಂದು ಹೋಗಲು ಮತ್ತು ಉಳಿದು ಕೊಳ್ಳುವ ವೆಚ್ಚವನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಭರಿಸಲಿದೆ. ಈವರೆಗೆ 200 ಮಹಿಳಾ ಪತ್ರಕರ್ತರಿಗೆ ಆಮಂತ್ರಣವನ್ನು ಕಳುಹಿಸಲಾಗಿದ್ದು ಇನ್ನಷ್ಟು ಪತ್ರಕರ್ತರಿಗೆ ಆಮಂತ್ರಣ ಕಳುಹಿಸುವ ಕಾರ್ಯ ಜಾರಿಯಲ್ಲಿದೆ.

  ಕೇಂದ್ರ ಸರಕಾರದ ವತಿಯಿಂದ ಸರಕಾರಕ್ಕೆ ಎರಡು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್ ಬಳಿ “ಏಕ್ ನಯಿ ಸುಬಹ್” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸರಕಾರದ ಎಲ್ಲ ಉನ್ನತ ಸಚಿವರೆಲ್ಲರೂ ಇದರಲ್ಲಿ ಸಚಿವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ನರೇಂದ್ರ ಮೋದಿಯ ಭಾಷಣವಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News