ಮಲೇಶ್ಯ, ಆಸ್ಟ್ರೇಲಿಯ, ಚೀನಾ ಸಭೆ

Update: 2016-07-01 18:34 GMT

ಸಿಡ್ನಿ, ಜು. 1: ನಾಪತ್ತೆಯಾಗಿರುವ ಮಲೇಶ್ಯನ್ ಏರ್‌ಲೈನ್ಸ್ ಎಂಎಚ್370 ವಿಮಾನದ ಶೋಧದ ಭವಿಷ್ಯದ ಬಗ್ಗೆ ಚರ್ಚಿಸಲು ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನಾಗಳ ಸಚಿವರು ಜುಲೈ 19ರಂದು ಕೌಲಾಲಂಪುರದಲ್ಲಿ ಭೇಟಿಯಾಗಲಿದ್ದಾರೆ ಎಂದು ಮಲೇಶ್ಯದ ಸರಕಾರಿ ವಾರ್ತಾ ಸಂಸ್ಥೆ ಬರ್ನಾಮ ಶುಕ್ರವಾರ ವರದಿ ಮಾಡಿದೆ.

2014 ಮಾರ್ಚ್ 8ರಂದು ಕೌಲಾಲಂಪುರದಿಂದ ಬೀಜಿಂಗ್‌ಗೆ 239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಹಾರುತ್ತಿದ್ದ ಎಂಎಚ್370 ವಿಮಾನವು ನಾಪತ್ತೆಯಾಗಿತ್ತು. 2015 ಜುಲೈಯಲ್ಲಿ ವಿಮಾನದ ರೆಕ್ಕೆಯ ಭಾಗವೊಂದು ಫ್ರಾನ್ಸ್‌ನರೀಯೂನಿಯನ್ ದ್ವೀಪದ ದಡದ ಮೇಲೆ ಬಿದ್ದಿತ್ತು.

ವಿಮಾನಕ್ಕಾಗಿ ದಕ್ಷಿಣ ಹಿಂದೂ ಮಹಾ ಸಾಗರದ 1.2 ಲಕ್ಷ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ನೀರಿನಾಳದ ಶೋಧ ಕಾರ್ಯಾಚರಣೆ ಸಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News