ಭಾರತದತ್ತ ಸಾಗುತ್ತಿದ್ದ ಹಡಗಿನ ಮೇಲೆ ಹೌದಿಗಳ ಕ್ಷಿಪಣಿ ದಾಳಿ

Update: 2024-04-27 15:59 GMT

Photo: NDTV ( ಸಾಂದರ್ಭಿಕ ಚಿತ್ರ)

ಸನಾ : ಕೆಂಪು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ `ಅಂಡ್ರೊಮೆಡ ಸ್ಟಾರ್' ಟ್ಯಾಂಕರ್ ಹಡಗಿನ ಮೇಲೆ ಮೂರು ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್‍ನ ಹೌದಿಗಳು ಶನಿವಾರ ಹೇಳಿದ್ದಾರೆ.

ಪನಾಮಾದ ಧ್ವಜ ಹೊಂದಿರುವ `ಅಂಡ್ರೊಮೆಡ ಸ್ಟಾರ್' ಟ್ಯಾಂಕರ್(ತೈಲ ಸಾಗಿಸುವ ಹಡಗು) ಬ್ರಿಟನ್ ಸಂಸ್ಥೆಯ ಮಾಲಕತ್ವ ಹೊಂದಿದೆ ಎಂದು ಹೌದಿಗಳ ಹೇಳಿಕೆ ತಿಳಿಸಿದೆ. ಆದರೆ ಹಡಗಿನ ಈಗಿನ ಮಾಲಕ ಸೀಶೆಲ್ಸ್‍ನಲ್ಲಿ ನೋಂದಾವಣೆ ಮಾಡಿಕೊಂಡಿದ್ದು ರಶ್ಯಕ್ಕೆ ಸಂಬಂಧಿಸಿದ ತೈಲವನ್ನು ರಶ್ಯದಿಂದ ಗುಜರಾತ್‍ನ ವದಿನಾರ್ ಬಂದರಿಗೆ ಸಾಗಿಸುತ್ತಿತ್ತು ಎಂದು ವರದಿಯಾಗಿದೆ.

ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ. ಆದರೆ ಹಡಗಿಗೆ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News