ಈ ಯುವತಿ ಫೇಸ್ ಬುಕ್‌ ಖಾತೆ ತೆರೆಯುವಂತಿಲ್ಲ, ಇದಕ್ಕೆ ಕಾರಣ ಐಸಿಸ್..!

Update: 2016-07-03 06:38 GMT

ಲಂಡನ್, ಜುಲೈ 3: ಬ್ರಿಟನ್‌ನ 27ವರ್ಷದ ಯುವತಿ ಐಸಿಸ್‌ಳಿಗೆ ಅವಳ ಹೆಸರಿನಿಂದಾಗಿ ಫೇಸ್‌ಬುಕ್‌ನಲ್ಲಿ ಖಾತೆ ತೆರೆಯುವ ಅನುಮತಿಯಿಲ್ಲ. ಸೋಶಿಯಲ್ ನೆಟ್‌ವರ್ಕ್ ವೆಬ್‌ಸೈಟ್ ಅವಳಲ್ಲಿ ತನ್ನ ಪರಿಚಯ ಪತ್ರವನ್ನು ಕೇಳಿದೆ. ಈ ಹುಡುಗಿಯ ಹೆಸರಲ್ಲಿ ಐಎಸ್‌ಐಎಸ್‌ಎಂಬ ಆಂಗ್ಲ ಅಕ್ಷರಗಳಿರುವ ಕಾರಣದಿಂದ ಅವಳ ಹೆಸರನ್ನು ಬದಲಾಯಿಸಲು ಫೇಸ್‌ಬುಕ್ ಸಲಹೆ ನೀಡಿದೆ. ಐಸಿಸ್ ಭಯೋತ್ಪಾದಕ ಸಂಘಟನೆಯಾಗಿರುವುದು ಈ ಹುಡುಗಿಗೆ ಕಷ್ಟವನ್ನು ತಂದೊಡ್ಡಿದ

ಬ್ರಿಟನ್‌ನ ಬ್ರಿಸ್ಟಲ್‌ನಲ್ಲಿ ವಾಸವಿರುವ ಐಸಿಸ್ ಥಾಮಸ್ ಕಳೆದ ಜೂನ್ 27ಕ್ಕೆ ವೆಬ್‌ಸೈಟ್ ಲಾಗ್ ಆನ್ ಮಾಡಿದಾಗ ಅವಳಿಗೆ ಹೆಸರು ಬದಲಾಯಿಸಿಕೊಳ್ಳಲು ಸೂಚನೆ ನೀಡಲಾಯಿತು. ಐಸಿಸ್ ಹೇಳುತ್ತಾಳೆ ತಾನು ಲಾಗ್ ಆನ್ ಮಾಡಲು ಪ್ರಯತ್ನಿಸಿದಾಗ ಒಂದು ಬಾಕ್ಸ್ ಬಂದು ಹೆಸರು ಬದಲಾಯಿಸಲು ಸಲಹೆ ನೀಡಿತು. ಅವಳ ಫೇಸ್ ಬುಕ್ ಖಾತೆ ಐಸಿಸ್ ವಾರ್ಕಸ್ಟರ್ ಎಂಬ ಹೆಸರಲಿತ್ತು. ಕೆಲವು ವರ್ಷದ ಮೊದಲು ಫೇಸ್‌ಬುಕ್ ಖಾತೆ ತೆರೆದಿದ್ದಾಗ ತನ್ನ ಅಸಲಿ ಹೆಸರು ಐಸಿಸ್ ಥಾಮಸ್‌ನ್ನು ಬಳಸಿರಲಿಲ್ಲ ಎಂದು ಅವಳು ಹೇಳಿದ್ದಾಳೆ. ತನ್ನ ಹೆಸರಿನಿಂದ ತೊಂದರೆ ಇದ್ದರೆ ಎಂದು ಯೋಚಿಸಿ ತನ್ನ ಹೆಸರನ್ನು ಐಸಿಸ್ ಥಾಮಸ್ ಎಂದು ಬದಲಾಯಿಸಿಕೊಂಡಿದ್ದಳು. ಆದರೆ ಅದುಕೂಡಾ ಸ್ವೀಕೃತವಾಗಲಿಲ್ಲ. ನಂತರವೇ ಐಸಿಸ್ ಎಂಬ ಹೆಸರು ಫೇಸ್‌ಬುಕ್‌ಗೆ ಇಷ್ಟವಿಲ್ಲ ಎಂದು ಅವಳಿಗೆ ತಿಳಿದಿದ್ದು “ಐಸಿಸ್” ಭಯೋತ್ಪಾದಕ ಸಂಘಟನೆಯಾಗಿರುವುದರಿಂದ ಅದರ ವಿರುದ್ಧ ಫೇಸ್‌ಬುಕ್ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಐಸಿಸ್ ಹೆಸರನ್ನು ಬದಲಾಯಿಸಲು ಸೂಚಿಸಿದೆ. ಆದರೆ ಐಸಿಸ್‌ಳ ತಾಯಿ ಈಜಿಪ್ಟ್‌ನ ಒಂದು ದೇವತೆಯ ಹೆಸರನ್ನು ಅವಳಿಗೆ ಇಟ್ಟಿದ್ದರು ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News