ಒಮನ್‌ನನಲ್ಲಿ ಸಂಭ್ರಮದ 46ನೆ ನವೋತ್ಥಾನ ದಿನಾಚರಣೆ

Update: 2016-07-24 06:06 GMT

ಮಸ್ಕತ್,ಜುಲೈ 24: ಪ್ರಗತಿ- ಅಭಿವೃದ್ಧಿಯ ಸ್ಮರಣೆಯನ್ನು ನವೀರಿಸುತ್ತಾ ಸುಲ್ತಾನೇಟ್‌ನಲ್ಲಿ 46ನೆ ನವೋತ್ಥಾನ ದಿನವನ್ನು ಸಂಭ್ರಮದಿಂದ ಆಚರಿಸಿದೆ ಎಂದು ವರದಿಯಾಗಿದೆ.ದೂರದೃಷ್ಟಿ ಮತ್ತು ಬಲಿಷ್ಠವಾಗಿ 46 ವರ್ಷಗಳಿಂದ ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವ ಸುಲ್ತಾನರಿಗೆ ಜನರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು ನವೋತ್ಥಾನದ ದಿನಾಚರಣೆಯ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ವರದಿ ತಿಳಿಸಿದೆ.

   ಒಮನ್ ಆಡಳಿತಗಾರರು ಹಾಗೂ ಒಮನ್‌ನ ಜನತೆಯನ್ನು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಸಿಸಿ ಸೇರಿದಂತೆ ಬೇರೆಬೇರೆ ರಾಷ್ಟ್ರಗಳ ಅನೇಕ ಗಣ್ಯರು ಈ ಸಂದರ್ಭದಲ್ಲಿ ಅಭಿನಂದಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ.ದೇಶದ ಸಚಿವರು, ಗಣ್ಯರು ಒಮನ್ ಆಡಳಿತಗಾರನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ನವೋತ್ಥಾನ ದಿನದ ಅಂಗವಾಗಿ ದಿನಪತ್ರಿಕೆಗಳು ಸುಲ್ತಾನರಿಗೆ ಅಭಿನಂದನೆಗಳನ್ನು ಅರ್ಪಿಸಿ ಲೇಖನಗಳನ್ನು ಪ್ರಕಟಿಸಿವೆ. ವ್ಯಾಪಾರ,ವಾಣಿಜ್ಯ ಸಂಸ್ಥೆಗಳ ಅಭಿನಂದನಾ ಜಾಹೀರಾತುಗಳನ್ನು ವಿವಿಧ ದಿನ ಪತ್ರಿಕೆಗಳು ಪ್ರಕಟಿಸಿವೆ. ಮುಸನ್ನಾದ ಏರ್‌ಬೇಸ್‌ನಲ್ಲಿ ಪಾರಗ್ಲೈಡಿಂಗ್ ಪ್ರದರ್ಶನ ನಡೆದಿದ್ದು ಅದನ್ನು ವೀಕ್ಷಿಸಲು ಜನಸಂದಣಿ ನೆರೆದಿತ್ತು. ನವೋತ್ಥಾನ ದಿನದ ಅಂಗವಾಗಿ ಇಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News