ಯುಎಇ: ಸೈಬರ್ ಅಪರಾಧ ಕೃತ್ಯಗಳಿಗೆ ಕನಿಷ್ಠ 92ಲಕ್ಷರೂ. ವರೆಗೆ ದಂಡ!

Update: 2016-07-24 06:35 GMT

ಅಬುಧಾಬಿ,ಜುಲೈ 24; ಸೈಬರ್ ಅಪರಾಧಗಳಿಗೆ ಯುಎಇಯಲ್ಲಿ ಕಠಿಣ ದಂಡ ವಿಧಿಸಲಾಗುವುದೆಂದು ವರದಿಯಾಗಿದೆ. ಯುಎಇ ಅಧ್ಯಕ್ಷ ಘನತೆ ವೆತ್ತ ಶೇಖ್ ಖಲೀಫ ಬಿನ್ ಸೈಯದ್ ಅಲ್ ನಹ್ಯಾನ್ ಇದಕ್ಕೆ ಸಂಬಂಧಿಸಿದ ಫೆಡರಲ್ ಕಾನೂನಿಗೆ ತಿದ್ದುಪಡಿ ತಂದಿದ್ದು, ಬೇರೆ ವ್ಯಕ್ತಿಯ ಐಪಿ ವಿಳಾಸ ಸೋರಿಕೆ ಮಾಡಿದರೆ ಐದುಲಕ್ಷದಿಂದ 20 ಲಕ್ಷ ದಿರ್‌ಹಂ ವರೆಗೂ ದಂಡ ವಿಧಿಸಬಹುದಾಗಿದೆ. ಕನಿಷ್ಠ ದಂಡ ಎಂದರೆ 92ಲಕ್ಷ ರೂಪಾಯಿಯಾಗಿದೆ. ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುವುದು ಎಂದು ವರದಿ ತಿಳಿಸಿದೆ.

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಪರಾಧ ಕೃತ್ಯಗಳಿಗೆ ಕಠಿಣ ಶಿಕ್ಷೆ ನೀಡುವ ಫೆಡರಲ್ ಕಾನೂನು ತಿದ್ದುಪಡಿ 12/2016ನ್ನು ಜಾರಿಗೆ ತರಲಾಗಿದ್ದು, ಫೆಡರಲ್ ಕಾನೂನು 45/199 ತಿದ್ದುಪಡಿ ಮಾಡಿ ಹೊಸ ಶಿಕ್ಷೆಯ ನಿಯಮಗಳನ್ನು ರೂಪಿಸಲಾಗಿದೆ ಎನ್ನಲಾಗಿದೆ.

ತಿದ್ದುಪಡಿ ಪ್ರಕಾರ ಬೇರೆಯವರ ಖಾತೆಯನ್ನು ತಮಾಷೆಗೆ ಹ್ಯಾಕ್ ಮಾಡುವುದು.ಆರ್ಥಿಕ ಅಪರಾಧವೆಸಗುವ ಉದ್ದೇಶದಿಂದ ಖಾತೆಗಳನ್ನು ತಜ್ಞರ ಸಹಕಾರದಿಂದ ಸೋರಿಕೆ ಮಾಡುವುದು, ವ್ಯಕ್ತಿ ದ್ವೇಷದಿಂದ ಸೈಬರ್ ಅಪರಾಧ ಎಸಗುವುದು ಇತ್ಯಾದಿಗಳಿಗೆ ಕಠಿಣ ಶಿಕ್ಷೆಯಿದೆ.

ತಂತ್ರಜ್ಞಾನ ರಂಗದಲ್ಲಾದ ಪ್ರಗತಿ ಅಪರಾಧ ಕೃತ್ಯದಲ್ಲಿ ಹೆಚ್ಚಳವಾಗಲು ಕಾರಣವೆಂದು ಅಂದಾಜಿಸಲಾಗಿದ್ದು ಈ ನಿಟ್ಟಿನಲ್ಲಿ ಕಾನೂನಲ್ಲಿ ತಿದ್ದುಪಡಿ ಮೂಲಕ ಸುಧಾರಣೆ ನಡೆಸಲು ಯುಎಇ ನಿರ್ಧರಿಸಿತ್ತೆನ್ನಲಾಗಿದೆ. ಹೊಸ ಕಾನೂನುಗಳು ಗಜೆಟ್‌ನಲ್ಲಿ ಪ್ರಕಟವಾಗುವುದರೊಂದಿಗೆ ಜಾರಿಗೆ ಬರಲಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News