ಅಳಿವಿನಂಚಿನಲ್ಲಿ ಪಾರ್ಸಿ ಸಮುದಾಯ!

Update: 2016-07-25 18:31 GMT

ಹೊಸದಿಲ್ಲಿ, ಜು.25: ಪಾರ್ಸಿಗಳು ಮಾಯವಾಗುತ್ತಿದ್ದಾರೆ. 2001-2001ರ ದಶಕದಲ್ಲಿ ಅವರ ಪ್ರಮಾಣ ಭಾರತದಲ್ಲಿ ಶೇ.22ರಷ್ಟು ಕುಸಿದಿತ್ತು ಹಾಗೂ ಅವರ ಒಟ್ಟು ಜನಸಂಖ್ಯೆ 57 ಸಾವಿರದಷ್ಟಾಗಿತ್ತೆಂದು ಸೋಮವಾರ ಬಿಡುಗಡೆಯಾಗಿರುವ 2011ರ ಜನಗಣತಿ ಅಂಕಿ-ಅಂಶ ತಿಳಿಸಿದೆ.

2001ರಲ್ಲಿ ದೇಶದಲ್ಲಿ 69,601 ಮಂದಿ ಪಾರ್ಸಿಗಳಿದ್ದರು. ಅವರಲ್ಲಿ 28,115 ಮಂದಿ ಗಂಡಸರಾಗಿದ್ದರೆ, 29,149 ಮಂದಿ ಹೆಂಗಸರಾಗಿದ್ದರು. ಇದು 1981ರ ಬಳಿಕ ಈ ಸಮುದಾಯದ ಜನಸಂಖ್ಯೆಯ ಅತ್ಯಂತ ತೀವ್ರ ಇಳಿಕೆಯಾಗಿದೆ. ಹಿಂದಿನ ದಶಕಕ್ಕಿಂತ ಶೇ.27ರಷ್ಟು ಪಾರ್ಸಿಗಳ ಜನಸಂಖ್ಯೆ ಕುಸಿದಿದೆಯೆಂದು ಜನಗಣತಿ ವರದಿ ಮಾಡಿದೆ. ಬಳಿಕದ ವರ್ಷಗಳಲ್ಲಿ ಸಮುದಾಯವು ತನ್ನ ಜನಸಂಖ್ಯೆ ಇಳಿತವನ್ನು ನಿಯಂತ್ರಿಸಲು ಶಕ್ತವಾಗಿತ್ತು. ಆದರೆ, 2001ರ ಗಣತಿಯಲ್ಲಿ ಅವರ ಸಂಖ್ಯೆ ಪುನಃ ಕಡಿಮೆಯಾಗುತ್ತಿರುವ ಸೂಚನೆ ಲಭಿಸಿತ್ತು.

ಮಹಾರಾಷ್ಟ್ರದಲ್ಲಿ ದೇಶದಲ್ಲೇ ಗರಿಷ್ಠ ಸಂಖ್ಯೆಯ (44,854) ಪಾರ್ಸಿಗಳಿದ್ದಾರೆ. ದಿಲ್ಲಿಯಲ್ಲಿ ಅವರ ಸಂಖ್ಯೆ ಕೇವಲ 221.

ಉನ್ನತ ಸಾಕ್ಷರತೆ ಹಾಗೂ ಲಿಂಗಾನುಪಾತದ ಹೆಗ್ಗಳಿಕೆ ಪಡೆದಿರುವ ಪಾರ್ಸಿ ಸಮುದಾಯದ ಹಲವರು, ಸುಧಾರಣ ಕ್ರಮ ಕೈಗೊಳ್ಳದಿದ್ದಲ್ಲಿ ಪಾರ್ಸಿಗಳು ಅಳಿವಿನಂಚಿನ ಸಮುದಾಯವಾಗಬಹುದೆಂಬ ಎಚ್ಚರಿಕೆ ನೀಡಿದ್ದಾರೆ.

ರೆರಾಷ್ಟ್ರಿಯನ್ ಸಮುದಾಯದ ಅಳಿವು ಅಥವಾ ಉಳಿವು ಇಂದಿನ ಪಾರ್ಸಿಗಳು ಹಾಗೂ ಇರಾನಿಯನ್ ರೆರಾಷ್ಟ್ರಿಯನ್ನರು ಕೈಗೊಳ್ಳುವ ನಿರ್ಧಾರವನ್ನವಲಂಬಿಸಿದೆಯೆಂದು ಹಾರ್ವರ್ಡ್ ವಿವಿಯಲ್ಲಿ ಸಂಶೋಧನಾ ವಿದ್ವಾಂಸನಾಗಿರುವ ದಿನ್ಯಾರ್ ಪಟೇಲ್ ಎಂಬ ಪಾರ್ಸಿ ತನ್ನ 2011ರ ಅಧ್ಯಯನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News