×
Ad

ಕ್ರಿಕೆಟ್ ಆಡುವಾಗ ಮರ್ಮಾಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಮೃತ್ಯು

Update: 2024-05-06 12:23 IST

Photo credit: indiatoday.in/

ಪುಣೆ: ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ, ಕ್ರಿಕೆಟ್ ಚೆಂಡು ಮರ್ಮಾಂಗಕ್ಕೆ ಬಡಿದು 11 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿ ನಡೆದಿದೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬ್ಯಾಟರ್ ಬಾಲನ್ನು ನೇರವಾಗಿ ತನ್ನತ್ತ ಹೊಡೆದಾಗ ಶೌರ್ಯ ಎಂಬ ಬಾಲಕ ಬೌಲಿಂಗ್ ಮಾಡುತ್ತಿದ್ದ. ವೇಗವಾಗಿ ಬಂದ ಚೆಂಡು ಶೌರ್ಯನ ಮರ್ಮಾಂಗಕ್ಕೆ ಬಡಿದಿದ್ದರಿಂದ, ಆತ ಮೈದಾನದಲ್ಲೇ ಕುಸಿದು ಬಿದ್ದಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ನಂತರ ಬಾಲಕನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News