ಪ್ರೊ ಕಬಡ್ಡಿ ಲೀಗ್ :ಪಾಟ್ನಾ ಪೈರೇಟ್ಸ್ ,ಸ್ಟಾರ್ಮ್ ಕ್ವೀನ್ಸ್ ಚಾಂಪಿಯನ್

Update: 2016-07-31 19:10 GMT

 ಹೈದರಾಬಾದ್, ಜು.31: ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಇಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಇಂದು ಜೈಪುರ ಪಿಂಕ್ ಪ್ಯಾಂಥರ್ಸ್‌ ವಿರುದ್ಧ 37-29 ಅಂತರದಲ್ಲಿ ಜಯ ಗಳಿಸಿ ಎರಡನೆ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.
 ಮಹಿಳೆಯರ ಪ್ರೊ ಕಬಡ್ಡಿ ಲೀಗ್‌ನ ಫೈನಲ್ ಪಂದ್ಯದಲ್ಲಿ ಫೈರ್ ಬರ್ಡ್ಸ್ ತಂಡದ ವಿರುದ್ಧ ಸ್ಟಾರ್ಮ್ ಕ್ವೀನ್ಸ್ ತಂಡ 24-23 ಅಂತರದಲ್ಲಿ ಜಯ ಗಳಿಸಿ ಟ್ರೋಫಿಯನ್ನು ಬಾಚಿಕೊಂಡಿದೆ.
   ಕನ್ನಡತಿ ತೇಜಸ್ವಿನಿ ಬಾಯಿ ಅವರ ತಂಡ ಕ್ವೀನ್ಸ್ ತಂಡ ಕನ್ನಡತಿ ಮಮತಾ ಪೂಜಾರಿ ಅವರ ಬರ್ಡ್ಸ್ ವಿರುದ್ಧ ಕೇವಲ 1 ಪಾಯಿಂಟ್ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸ್ಟಾರ್ಮ್ ಕ್ವೀನ್ಸ್ ತಂಡದ ಸಾಕ್ಷಿ ಕುಮಾರಿ 8 ಪಾಯಿಂಟ್ ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
 ನಾಯಕಿ ತೇಜಸ್ವಿನಿ ಬಾಯಿ ಮತ್ತು ಸೋನಾಲಿ ಇಂಗ್ಲೆ ತಲಾ 4 ಪಾಯಿಂಟ್ , ದೀಪಿಕಾ ಜೋಸೆಫ್ ಮತ್ತು ಭಾವನಾ ಯಾದವ್ ತಲಾ 2 ಪಾಯಿಂಟ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು.
ಫೈರ್ ಬರ್ಡ್ಸ್ ತಂಡದ ರಿಂಜು ಕೆ 7 ಪಾಯಿಂಟ್, ಕಿಶೋರಿ ಶಿಂದೆ, 4 ಪಾಯಿಂಟ್, ನಾಯಕಿ ಮಮತಾ ಪೂಜಾರಿ, ಮರಿಯಾ ಮೋನಿಕಾ, ರಿತು ನೇಗಿ ಮತ್ತು ಗಾಯತ್ರಿ ತಲಾ 2 ಪಾಯಿಂಟ್ ಜಮೆ ಮಾಡಿದರೂ ತಂಡ ಗೆಲುವಿನ ದಡ ಸೇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News