ಮಹಾದಾಯಿ ಹೋರಾಟಗಾರರ ವಿರುದ್ಧ ಮೊಕದ್ದಮೆ: ಆ.10ರಂದು ತೀರ್ಮಾನ; ಸಿಎಂ
Update: 2016-08-07 14:17 IST
ಬೆಂಗಳೂರು, ಆ.7: ಮಹಾದಾಯಿ ಯೋಜನೆಯ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ವಿಧಾನ ಮಂಡಲ ಉಭಯ ಸದನ ನಾಯಕರು, ಸಚಿವರು ಹಾಗೂ ಸಂಸದರ ಸಭೆಯು ಇಂದು ಬೆಳಗ್ಗೆ ನಡೆಯಿತು.
ಮಹಾದಾಯಿ ಹೋರಾಟಗಾರರ ವಿರುದ್ಧ ಕೇಸುಗಳ ದಾಖಲು ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಈ ಕುರಿತಂತೆ ಪರಿಶೀಲನೆಗೆ ರಾಘವೇಂದ್ರ ಔದಾದ್ಕರ್‌ರನ್ನು ನೇಮಕ ಮಾಡಲಾಗಿದೆ. ಅವರು ಈ ಬಗ್ಗೆ ಸರಕಾರಕ್ಕೆ ವರದಿ ನೀಡಲಿದ್ದಾರೆ.
ಪ್ರಕರಣದ ಮರು ಪರಿಶೀಲನೆಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, 23 ದಿನಗಳಲ್ಲಿ ಈ ಬಗ್ಗೆ ಸಮಗ್ರ ವರದಿ ಸರ್ಕಾರದ ಕೈ ಸೇರಲಿದೆ. ಅಮಾಯಕರು, ನಿರಪರಾಧಿಗಳ ಮೇಲೆ ಕೇಸು ದಾಖಲಾಗಿದ್ದರೆ ಅದನ್ನು ವಾಪಸ್ ಪಡೆಯುವ ಕುರಿತು ಆ.10ರಂದು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.