ಮತದಾನಕ್ಕೆ 48 ತಾಸುಗಳ ಮುನ್ನ ಮುದ್ರಣ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನಿಷೇಧಿಸಿ

Update: 2016-08-08 18:32 GMT

ಹೊಸದಿಲ್ಲಿ, ಆ.8: ಮತದಾನದ ಆರಂಭಕ್ಕೆ 48 ಗಂಟೆಗಳ ಮೊದಲು ಸುದ್ದಿಪತ್ರಿಕೆಗಳಲ್ಲಿ ರಾಜಕೀಯ ಜಾಹೀರಾತುಗಳನ್ನು ನಿಷೇಧಿಸುವುದಕ್ಕಾಗಿ ಚುನಾವಣಾ ಕಾನೂನಿಗೆ ತಿದ್ದುಪಡಿ ತರಬೇಕೆಂದು ಚುನಾವಣಾ ಆಯೋಗವು ಸೋಮವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

2015ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಂತಹ ಚುನಾವಣಾ ಜಾಹೀರಾತುಗಳನ್ನು ಪ್ರತಿ ಪ್ರಕರಣಕ್ಕೆ ಅನುಗುಣವಾಗಿ ನಿಷೇಧಿಸಲು ತನ್ನ ಸಾಂವಿಧಾನಿಕ ಅಧಿಕಾರಗಳನ್ನು ಬಳಸಿಕೊಂಡಿತ್ತು.

ಮೇನಲ್ಲಿ ನಡೆದ ಕಾನೂನು ಸಚಿವಾಲಯದ ಶಾಸಕಾಂಗ ವಿಭಾಗದ ಜೊತೆ ನಡೆಸಿದ ಸಭೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಹಾಗೂ ಸಹ ಆಯುಕ್ತರಾದ ಎ.ಕೆ. ಜ್ಯೋತಿ ಹಾಗೂ ಓ.ಪಿ.ರಾವತ್ ಅವರು, ಜನತಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 129ರ ವ್ಯಾಪ್ತಿಗೆ ಮುದ್ರಣ ಮಾಧ್ಯಮವೂ ಒಳಪಡುವುದರಿಂದ, ಮತದಾನದ ದಿನಕ್ಕೆ 48 ತಾಸುಗಳ ಮೊದಲು ಸುದ್ದಿ ಪತ್ರಿಕೆಗಳಲ್ಲಿ ಯಾವುದೇ ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದರು.

 ಪ್ರಸ್ತುತ ಈ ಅವಧಿಯಲ್ಲಿ ಟಿವಿ ಸೇರಿದಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳು, ರೇಡಿಯೋ ಹಾಗೂ ಸಾಮಾಜಿ ಮಾಧ್ಯಮಗಳಲ್ಲಿ ಜಾಹೀರಾತು ಪ್ರಸಾರವನ್ನು ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News