ಅಭಿವ್ಯಕ್ತಿಸ್ವಾತಂತ್ರ್ಯಕ್ಕೆಎಬಿವಿಪಿಯಿಂದ ಅಡ್ಡಿ

Update: 2016-08-14 18:49 GMT

ಬೆಂಗಳೂರು, ಆ.14: ನಗರದ ಮಿಲ್ಲರ್ಸ್‌ ರಸ್ತೆಯಲ್ಲಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್ ಸಭಾಂಗಣದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಹಯೋಗದಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಸಂವಾದದ ವೇಳೆ ಕಾಶ್ಮೀರಿಗಳು ಸೇನೆಗೆ ಅವಮಾನ ಮಾಡಿದರು ಎಂದು ಎಬಿವಿಪಿ ಆರೋಪಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸಿದೆ.

 ಸೇನೆಯ ದಾಳಿಗೆ ತುತ್ತಾಗಿರುವ ಸಂತ್ರಸ್ತರು ಸೇನೆಯಿಂದ ನಮಗೆ ಅನ್ಯಾಯ ಆಗುತ್ತದೆ. ವಿನಾಕಾರಣ ಸೇನೆ ನಮ್ಮ ಮೇಲೆ ದಾಳಿ ಮಾಡುತ್ತಿದೆ. ಇದು ನಿಲ್ಲಬೇಕು. ಇದರಿಂದ ನಮಗೆ ಸ್ವಾತಂತ್ರ ದೊರೆಯಬೇಕು. ದೇಶದ ಐಕ್ಯತೆ ಬೇಕು, ಸೌಹಾರ್ದ ಉಳಿಯಬೇಕೆಂದು ಚರ್ಚೆ ನಡೆಸುವ ವೇಳೆ ಎಬಿವಿಪಿ ನಕಲಿ ದೇಶಭಕ್ತರಿಗೆ ಈ ಚರ್ಚೆಯಲ್ಲಿ ಕಂಡು ಬಂದ ದೇಶದ್ರೋಹದ ಅಂಶಗಳೇನು?ಎಂದು ಎಸ್‌ಎಫ್‌ಐ ಅಧ್ಯಕ್ಷ ಅಂಬರೀಷ್ ಪ್ರಶ್ನಿಸಿದ್ದಾರೆ.ಂದು ವೇಳೆ ಅಲ್ಲಿ ದೇಶದ್ರೋಹದ ಘೋಷಣೆಗಳು ಕೂಗಿದ್ದರೆ, ಕಾನೂನಿನ ಕ್ರಮಕ್ಕೆ ಒತ್ತಾಯಿಸಬೇಕಿತ್ತು. ಅದನ್ನು ಬಿಟ್ಟು ಕಾಲೇಜಿನ ನಾಮಫಲಕಕ್ಕೆ ಮಸಿ ಬಳಿದು ಕಾಲೇಜನ್ನು ದೇಶದ್ರೊಹದ ಸ್ಥಾನದಲ್ಲಿ ನಿಲ್ಲಿಸಿ ಬಿಂಬಿಸುವುದು ಸರಿಯಾದ ಕ್ರಮವಲ್ಲ ಹಾಗೂ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿರುವುದನ್ನು ಎಸ್‌ಎಫ್‌ಐ ಖಂಡಿಸುತ್ತದೆ ಎಂದು ಅವರು ಹೇಳಿದ್ದಾರೆ.
 ಪಾಲೆಟ್ ಗನ್ ಮೂಲಕ ಕಾಶ್ಮೀರದ ಜನರನ್ನು ಘಾಸಿಗೊಳಿಸಲಾಗುತ್ತದೆ. ಯುವಕರ ಮೇಲೆ ಪಾಲೆಟ್ ಗನ್ ಪ್ರಯೋಗ ಮಾಡಿದ್ದರಿಂದ ಕಣ್ಣುಕಳೆದು ಕೊಂಡಿದ್ದಾರೆ. ಹಲವು ಜನರು ಪ್ರಾಣ ಕಳೆದು ಕೊಂಡಿದ್ದಾರೆ. ಪೊಲೀಸ್ ಗೋಲಿಬಾರಿನಲ್ಲಿ ದಿನನಿತ್ಯ ಜೀವನ ಸಾಗಿಸುವ ಭಯದ ವಾತಾವರಣ ಅಲ್ಲಿ ಏರ್ಪಟ್ಟಿದೆ. ಇದನ್ನು ಖಂಡಿಸಿ ಎಬಿವಿಪಿ ಯಾವತ್ತೂ ಹೋರಾಟ ಮಾಡಲಿಲ್ಲ ಎಂದು ಅವರು ಟೀಕಿಸಿದ್ದಾರೆ.ಾಶ್ಮೀರದಲ್ಲಿ ತಲೆದೂರಿರುವ ಹಿಂಸಾಚಾರವನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ವೇದಿಕೆಯನ್ನು ಬಳಸಿಕೊಂಡು ಕಾಶ್ಮೀರದ ಜನರಿಗೆ ಸುರಕ್ಷತೆ ನೀಡಬೇಕೆಂದು ಅಂಬರೀಷ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News