ರಮ್ಯಾರ ಹೇಳಿಕೆ ಅಲ್ಲಗೆಳೆದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್
Update: 2016-08-27 12:21 IST
ಬೆಂಗಳೂರು, ಆ.27: ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಅವರು ನೀಡಿದ್ದಾರೆ ಎನ್ನಲಾದ ಮಂಗಳೂರು ನರಕ ಎಂಬ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ನೋಡಿಲ್ಲ ಎಂದು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ. ಅಲ್ಲದೆ, ಮಂಗಳೂರು ಸ್ವರ್ಗ ಎಂದು ಆಸ್ಕರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪ್ರವೀಣ ಪುಜಾರಿ ಮತ್ತು ಹರೀಶ್ ಪೂಜಾರಿ ಕೊಲೆ ಆಗಿದೆ. ಇದಕ್ಕೆ ಉತ್ತರವನ್ನು ಕಂಡು ಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.
ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಕುರಿತು ಸಿಎಂ ಬಳಿ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ದೇವೆ. ನಾಡದೋಣಿಗೆ ಸಬ್ಸಿಡ್ ಡಿಸೇಲ್ ನೀಡುವ ವಿಚಾರ ಮತ್ತು ಮೀನುಗಾರಿಕೆಗೆ ಸಂಬಂಧಿಸಿದಂತೆ ಹಾಗೂ ಜಿಲ್ಕೆಗಳ ಪ್ರಮುಖ ಸಮಸ್ಯೆಗಳ ಕುರಿತು ಸಿಎಂ ಅವ್ರ ಗಮನಕ್ಕೆ ತಂದಿದ್ದೇವೆ. ಸಿಎಂ ಸಿದ್ದರಾಮಯ್ಯ ಮನವಿಗೆ ಸ್ಪಂದಿಸಿದ್ದು ಇನ್ನೊಮ್ಮೆ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದು ಆಸ್ಕರ್ ತಿಳಿಸಿದರು.