2050ನೆ ಇಸವಿಯಲ್ಲಿ ವಿಶ್ವ ಜನಸಂಖ್ಯೆ ಎಷ್ಟಾಗಬಹುದು ಗೊತ್ತೇ ?

Update: 2016-08-30 11:36 GMT

ನ್ಯೂಯಾರ್ಕ್,ಆಗಸ್ಟ್ 30: 2050ಕ್ಕಾಗುವಾಗ ಜಾಗತಿಕ ಜನಸಂಖ್ಯಾ ಪ್ರಮಾಣ 1000ಕೋಟಿಯಷ್ಟಾಗಬಹುದು ಎಂದು ವರದಿಯೊಂದು ತಿಳಿಸಿದೆ.ಈಗ ವಿಶ್ವದಲ್ಲಿ 740ಕೋಟಿ ಜನರಿದ್ದಾರೆ. ಇದರಲ್ಲಿ ಶೇ. 33ರಷ್ಟು ಹೆಚ್ಚಳವಾಗಿ 2050ಕ್ಕಾಗುವಾಗ 990ಕೋಟಿಯನ್ನು ದಾಟಬಹುದು ಎಂದು ಪಾಪ್ಯುಲೇಶನ್ ರೆಫರೆನ್ಸ್ ಬ್ಯೂರೊ(ಪಿಆರ್‌ಬಿ) ಹೇಳಿದೆ. 2053ರಲ್ಲಿ ಜನಸಂಖ್ಯೆ ಬರೋಬ್ಬರಿ 1000 ಕೋಟಿಯನ್ನು ದಾಟಲಿದೆ ಎಂದು ಅಂದಾಜಿದಸಲಾಗಿದೆ. ಈಗ ಜನಸಂಖ್ಯೆ ಕಡಿಮೆ ಇರುವ ಯುರೋಪಿನ ಜನಸಂಖ್ಯೆ ಮಾತ್ರ ಕಡಿಮೆಯಾಗಲಿದೆ. ಆಫ್ರಿಕನ್ ದೇಶಗಳ ಜನಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಪಿಆರ್‌ಬಿ ಯ ಸಿಇಒ ಮತ್ತು ಅಧ್ಯಕ್ಷರಾದ ಜೆಫ್ರಿ ಜೋರ್ಡನ್ ಬೆಟ್ಟುಮಾಡಿದ್ದಾರೆಂದು ವರದಿಯಾಗಿದೆ.

 ಪಿಆರ್‌ಬಿಯ ವರದಿ ಪ್ರಕಾರ 2050ಕ್ಕಾಗುವಾಗ ಆಫ್ರಿಕದ ಜನಸಂಖ್ಯೆ 250ಕೋಟಿಯಾಗಲಿದೆ. ಯುರೋಪಿನ ಜನಸಂಖ್ಯೆ ಈಗಿರುವ 74 ಕೋಟಿ, 72 ಕೋಟಿಗಿಳಿಕೆಯಾಗಲಿದೆ. ಅದೇವೇಳೆ 29 ದೇಶಗಳ ಜನಸಂಖ್ಯೆ ದ್ವಿಗುಣವಾಗಲಿವೆ. ಅದು 42 ದೇಶಗಳಲ್ಲಿ ಕಡಿಮೆಯಾಗಲಿದೆ. ಅಮೆರಿಕದ ಜನಸಂಖ್ಯೆ 32.4 ಕೋಟಿಯಿಂದ ಶೇ. 23ರಷ್ಟು ಹೆಚ್ಚಳವಾಗಿ 39.8ಕೋಟಿಯಾಗಲಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News