ಅಬುಧಾಬಿಯಲ್ಲಿ ಪಾರ್ಕಿಂಗ್‌ನಲ್ಲಿಯೂ ಮಹಿಳಾ ಮೀಸಲಾತಿ!

Update: 2016-08-30 11:48 GMT

ಅಬುಧಾಬಿ,ಆಗಸ್ಟ್ 30: ಅಬುಧಾಬಿಯಲ್ಲಿ ಮಹಿಳೆಯರಿಗೆ ಪಾರ್ಕಿಂಗ್ ಮೀಸಲಾತಿ ಸೌಲಭ್ಯ ಒದಗಿಸಲಾಗುತ್ತಿದೆ. ಅಬುಧಾಬಿ ನಗರದಲ್ಲಿ ಒಟ್ಟು182 ಮಹಿಳಾ ಮೀಸಲು ಪಾರ್ಕಿಂಗ್ ಸ್ಥಳಗಳನ್ನು ಸಜ್ಜೀಕರಿಸಲಾಗುವುದು ಎಂದು ನಗರ-ಸಾರಿಗೆ ಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ. ಬಹುಮಹಡಿ ಕಟ್ಟಡಗಳ ಸಮೀಪ ಇಂತಹ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಹಂದಾನ್ ಬಿನ್ ಝಾಯಿದ್ ಸ್ಟ್ರೀಟ್‌ನ ಲಿವ ಸೆಂಟರ್‌ನ ಹಿಂಭಾಗದಲ್ಲಿ 26 ಮತ್ತು ಫಾತಿಮಬಿನ್ತ್ ಮುಬಾರಕ್ ಸ್ಟ್ರೀಟ್‌ನ ಟ್ರಿಯಾನನ್ ಹೊಟೆಲ್ ಹಿಂಭಾಗದಲ್ಲಿ 28 ಮಹಿಳಾ ಮೀಸಲು ಪಾರ್ಕಿಂಗ್ ಸ್ಥಳ ಇರಲಿವೆ. ಅಬುಧಾಬಿ ಆರೋಗ್ಯ ಅಥಾರಿಟಿಯ ಹಿಂಭಾಗದಲ್ಲಿ 18 ಪಾರ್ಕಿಂಗ್ ಸ್ಥಳ, ಅಲ್‌ದಾನ ಪ್ರದೇಶದಲ್ಲಿ ಅಬುಧಾಬಿ ತ್ವಾತೀನ್ ಕೌನ್ಸಿಲ್‌ನ ಹಿಂಭಾಗದಲ್ಲಿ 41 ಪಾರ್ಕಿಂಗ್ ಸ್ಥಳಗಳನ್ನು ಕೇವಲ ಮಹಿಳೆಯರಿಗೆ ಮೀಸಲಿರಿಸಲು ಸಚಿವಾಲಯ ನಿರ್ಧರಿಸಿದೆ. ಮುಂದೆ ಇನ್ನಷ್ಟು ಮಹಿಳಾ ಮೀಸಲು ಪಾರ್ಕಿಂಗ್ ಸ್ಥಳಗಳನ್ನು ನಿರ್ಣಯಿಸಲಾಗುವುದು ಎಂದು ನಗರ-ಸಂಚಾರ ಸಚಿವಾಲತಿಳಿಸಿದೆ. ಮಹಿಳಾ ಪಾರ್ಕಿಂಗ್‌ನ್ನು ಪುರುಷರು ಬಳಸುವುದಿಲ್ಲ ಎಂದು ಖಚಿತಪಡಿಸಲು ತಪಾಸಕರು ಇರಲಿದ್ದಾರೆ. ಕಾನೂನು ಉಲ್ಲಂಘಿಸುವ ಪುರುಷರ ವಾಹನವನ್ನು ವಶಕ್ಕೆ ಪಡೆದು ದಂಡವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News