ಇಂಗ್ಲೆಂಡಿನ ವಿಶ್ವದಾಖಲೆಯ ರನ್ ಶಿಖರಕ್ಕೆ ಶರಣಾದ ಪಾಕ್

Update: 2016-08-31 04:14 GMT

ನ್ಯಾಟಿಂಗ್‌ಹ್ಯಾಂ (ಇಂಗ್ಲೆಂಡ್), ಆ.31: ಕ್ರಿಕೆಟ್ ಜನಕ ದೇಶವಾದ ಇಂಗ್ಲೆಂಡ್ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ದಾಖಲೆ ಬರೆದಿದೆ. ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಮೂರು ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿ ಪಾಕಿಸ್ತಾನವನ್ನು 169 ರನ್‌ಗಳ ಭಾರೀ ಅಂತರದಿಂದ ಸೋಲಿಸುವ ಮೂಲಕ ವಿಶ್ವದಾಖಲೆ ಬರೆದು 3-0ರಿಂದ ಸರಣಿ ಕೈವಶ ಮಾಡಿಕೊಂಡಿತು.
ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಜೋಸ್ ಬಟ್ಲರ್ ಅವರು ಇಯಾನ್ ಮಾರ್ಗನ್ ತಂಡ ಶ್ರೀಲಂಕಾ ಸ್ಥಾಪಿಸಿದ್ದ 9 ವಿಕೆಟ್‌ಗೆ 443 ರನ್ ದಾಖಲೆಯನ್ನು ಮುರಿಯಿತು.
ರನ್ ಶಿಖರವನ್ನು ಭೇದಿಸಲು ಹೊರಟ ಪಾಕಿಸ್ತಾನ 42.4 ಓವರ್‌ಗಳಲ್ಲಿ 275 ರನ್‌ಗೆ ಆಲೌಟ್ ಆಗುವ ಮೂಲಕ ಸುಲಭವಾಗಿ ಶರಣಾಯಿತು. ಕ್ರಿಸ್ ವೋಕ್ಸ್ 41 ರನ್‌ಗೆ ನಾಲ್ಕು ವಿಕೆಟ್ ಕಿತ್ತು ಪಾಕಿಸ್ತಾನದ ಇನಿಂಗ್ಸ್ ಕುಸಿಯಲು ಕಾರಣರಾದರು. ಆರಂಭಿಕ ಆಟಗಾರ ಶರ್ಜೀಲ್ ಖಾನ್ 58 ರನ್ ಗಳಿಸಿದರೂ ನಿಯತವಾಗಿ ವಿಕೆಟ್‌ಗಳು ಬಿದ್ದ ಕಾರಣ ಪಾಕಿಸ್ತಾನ ಶರಣಾಗಲೇಬೇಕಾಯಿತು. 11ನೇ ಆಟಗಾರನಾಗಿ ಬಂದ ಮುಹಮ್ಮದ್ ಆಮೀರ್  28 ಬಾಲ್‌ಗಳಲ್ಲಿ 58 ರನ್ ಸಿಡಿಸಿ, ಕೊನೆಯ ವಿಕೆಟ್‌ಗೆ ಯಾಸಿರ್ ಶಾ (26 ನಾಟೌಟ್) ಅವರೊಂದಿಗೆ 76 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News