×
Ad

ಐಪಿಎಲ್ ನಲ್ಲಿ 150 ಕ್ಯಾಚ್‌ ಗಳನ್ನು ಪಡೆದ ಮೊದಲ ಆಟಗಾರ ಧೋನಿ

Update: 2024-05-05 23:20 IST

ಎಂ.ಎಸ್. ಧೋನಿ | PC : PTI 

ಹೊಸದಿಲ್ಲಿ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಜೆಂಡ್ ಎಂ.ಎಸ್. ಧೋನಿ ಐಪಿಎಲ್ ಟೂರ್ನಮೆಂಟ್ ಇತಿಹಾಸದಲ್ಲಿ 150 ಕ್ಯಾಚ್‌ ಗಳನ್ನು ಪಡೆದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯಕ್ಕಿಂತ ಮೊದಲು ಧೋನಿ 149 ಕ್ಯಾಚ್‌ ಗಳನ್ನು ಪಡೆದಿದ್ದರು. ಅತ್ಯುತ್ತಮ ವಿಕೆಟ್ ಕೀಪಿಂಗ್ ಗೆ ಖ್ಯಾತಿ ಪಡೆದಿರುವ ಧೋನಿ ತನ್ನ ಅಮೋಘ ಕೌಶಲ್ಯದ ಮೂಲಕ ವಿಶ್ವಕಪ್ ಕ್ರಿಕೆಟ್ ನಲ್ಲಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ.

ಆರ್ಸಿಬಿ ಪರ 144 ಕ್ಯಾಚ್‌ ಗಳನ್ನು ಪಡೆದಿರುವ ದಿನೇಶ್ ಕಾರ್ತಿಕ್ 2ನೇ ಸ್ಥಾನದಲ್ಲಿದ್ದರೆ, ಆರ್ಸಿಬಿಯ ದಿಗ್ಗಜ ಎಬಿಡಿವಿಲಿಯರ್ಸ್ ತನ್ನ ವೃತ್ತಿಜೀವನದಲ್ಲಿ 118 ಕ್ಯಾಚ್‌ ಗಳನ್ನು ಪಡೆದಿದ್ದಾರೆ.

ಐಪಿಎಲ್ ನಲ್ಲಿ ಹೆಚ್ಚು ಕ್ಯಾಚ್‌ ಗಳನ್ನು ಪಡೆದಿರುವ ಆಟಗಾರರು

ಎಂ.ಎಸ್.ಧೋನಿ-ಸಿಎಸ್ಕೆ-150

ದಿನೇಶ್ ಕಾರ್ತಿಕ್-ಆರ್ಸಿಬಿ-144

ಎಬಿಡಿ ವಿಲಿಯರ್ಸ್-ಆರ್ಸಿಬಿ-118

ವಿರಾಟ್ ಕೊಹ್ಲಿ-ಆರ್ಸಿಬಿ-113

ಸುರೇಶ್ ರೈನಾ-ಸಿಎಸ್ಕೆ-109

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News