×
Ad

ಟೀಮ್ ಇಂಡಿಯದ ನೂತನ ಟಿ20 ಜರ್ಸಿ ಅನಾವರಣ

Update: 2024-05-06 22:25 IST

PC : X \  adidas

ಹೊಸದಿಲ್ಲಿ : ಟಿ20 ವಿಶ್ವಕಪ್ ಗೆ ಪೂರ್ವಭಾವಿಯಾಗಿ ಟೀಮ್ ಇಂಡಿಯಾದ ನೂತನ ಟಿ20 ಜರ್ಸಿಯನ್ನು ಸೋಮವಾರ ಅನಾವರಣಗೊಳಿಸಲಾಗಿದೆ.

ಅಡಿಡಸ್ ಕಂಪೆನಿಯು ಭಾರತೀಯ ತಂಡದ ಪ್ರಾಯೋಜಕತ್ವವನ್ನು ಮುಂದುವರಿಸಿದೆ.

ಹೆಲಿಕಾಪ್ಟರೊಂದು ಟೀಮ್ ಇಂಡಿಯಾದ ನೂತನ ಟಿ20 ಜರ್ಸಿಯನ್ನು ಹೊತ್ತುಕೊಂಡು ಧರ್ಮಶಾಲಾ ಸ್ಟೇಡಿಯಮ್ನಲ್ಲಿ ಸುತ್ತು ಬರುವುದನ್ನು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ, ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ನೋಡುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಅಡಿಡಸ್ ಸೋಮವಾರ ಇನ್ಸ್ಟಾಗ್ರಾಮ್ನಲ್ಲಿ ಹಾಕಿದೆ.

‘‘ಒಂದು ಜರ್ಸಿ, ಒಂದು ದೇಶ. ಟೀಮ್ ಇಂಡಿಯಾದ ನೂತನ ಟಿ20 ಜರ್ಸಿಯನ್ನು ಸಾದರಪಡಿಸುತ್ತಿದ್ದೇವೆ’’ ಎಂದು ಅಡಿಡಸ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಸಾಮಾಜಿಕ ಮಾಧ್ಯಮವು ಈ ವೀಡಿಯೊವನ್ನು ರೀಪೋಸ್ಟ್ ಮಾಡಿದೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯು ಜೂನ್ 1ರಂದು ಆರಂಭಗೊಳ್ಳಲಿದೆ. ಭಾರತವು ತನ್ನ ಮೊದಲ ಪಂದ್ಯವನ್ನು ಜೂನ್ 4ರಂದು ಐರ್ಲ್ಯಾಂಡ್ ವಿರುದ್ಧ ಆಡಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News