ಮೆಡಿಕಲ್ ಪ್ರವೇಶಕ್ಕೆ: ಕರ್ನಾಟಕದಲ್ಲಿ ಕೇರಳದ ವಿದ್ಯಾರ್ಥಿಗಳಿಂದಲೇ ಹೆಚ್ಚು ಅರ್ಜಿ

Update: 2016-08-31 08:07 GMT

ಬೆಂಗಳೂರು ,ಆಗಸ್ಟ್ 31: ನ್ಯಾಶನಲ್ ಎಲಿಜಿಬಿಲಿಟಿ ಕಂ ಎನ್‌ಟ್ರಾನ್ಸ್ ಟೆಸ್ಟಿನಲ್ಲಿ(ನೀಟ್) ಎಂಬಿಬಿಎಸ್, ಬಿಡಿಎಸ್ ಪ್ರವೇಶಕ್ಕೆ ಯೋಗ್ಯತೆ ಸಂಪಾದಿಸಿರರುವ ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಖಾಸಗಿ ಕಾಲೇಜುಗಳಲ್ಲಿ ಮೆರಿಟ್ ಸೀಟುಗಳ ಪ್ರವೇಶ ಬಯಸಿ ಅರ್ಜಿಗುಜರಾಯಿಸಿದವರಲ್ಲಿ ಕೇರಳದ ವಿದ್ಯಾರ್ಥಿಗಳೇ ಅತ್ಯಧಿಕವಾಗಿದ್ದಾರೆ ಎಂದು ವರದಿಯಾಗಿದೆ.

ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ಕಾಲೇಜುಗಳ ಒಕ್ಕೂಟವಾದ ಕಾಮೆಡ್‌ಕೆಯ ಅಧೀನದಲ್ಲಿ ಬರುವ ಕಾಲೇಜುಗಳಿಗೆ ಪ್ರವೇಶಕ್ಕಾಗಿ 46,299 ಸೀಟುಗಳಿವೆ. ಇದರಲ್ಲಿ ಕೇರಳದಿಂದ 7287 ಮಂದಿ , 6498 ಮಂದಿ ಕರ್ನಾಟಕದಿಂದ ಪ್ರವೇಶ ಬಯಸಿದ್ದಾರೆ.

ಉತ್ತರಪ್ರದೇಶದಿಂದ 3979, ರಾಜಸ್ಥಾನದಿಂದ 3103, ಮಹಾರಾಷ್ಟ್ರದಿಂದ2971ಮಂದಿ, ಆಂಧ್ರಪ್ರದೇಶ, ತೆಲಂಗಾಣದಿಂದ 2942, ಬಿಹಾರದಿಂದ2707, ಹರಿಯಾಣದಿಂದ 2440, ದಿಲ್ಲಿಯಿಂದ 2245, ತಮಿಳ್ನಾಡಿನಿಂದ 2175 ಸೀಟು ಪಡೆಯಲು ಅರ್ಜಿಹಾಕಿದ್ದಾರೆ.ಇದಲ್ಲದೆ ಈ ರಾಜ್ಯದಲ್ಲದವರ 9952 ಅರ್ಜಿ ಬೇರೆಯೂ ಇವೆ. ಅರ್ಜಿಹಾಕಿದವರಲ್ಲಿ 27,149 ಮಂದಿ ವಿದ್ಯಾರ್ಥಿನಿಯರು ಆಗಿದ್ದಾರೆ.

ಕಾಮೆಡ್‌ಕೆ ಅಧೀನದ ಹದಿಮೂರು ಕಾಲೇಜುಗಳಲ್ಲಿ 688ಎಂಬಿಬಿಎಸ್ ಸೀಟುಗಳಿವೆ.23 ಕಾಲೇಜುಗಳಲ್ಲಿ 693 ಬಿಡಿಎಸ್ ಸೀಟುಗಳಿವೆ. ನೀಟಿನ ಅಧೀನದ ರ್ಯಾಂಕ್‌ಗಳನ್ನು ಸೆಪ್ಟಂಬರ್ ಆರಕ್ಕೆ ಕಾಮೆಡ್‌ಕೆ ಪ್ರಕಟಿಸಲಿದೆ. ಸೆ. 8ರಿಂದ ಹತ್ತರವರೆಗೆ ಕೌನ್ಸಿಲಿಂಗ್. ಕಳೆದ ಐದು ವರ್ಷಗಳ ರ್ಯಾಂಕ್‌ಗಳು ಮತ್ತು ಕಟ್‌ಆಫ್ ಮಾಕ್‌ಗಳನ್ನು ಕಾಮೆಡ್‌ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 4,09,477 ವಿದ್ಯಾರ್ಥಿಗಳು ಎರಡು ಹಂತದ ನೀಟ್ ಪರೀಕ್ಷೆಯಲ್ಲಿ ಮೆಡಿಕಲ್ ಪ್ರವೇಶಕ್ಕೆ ಅರ್ಹತೆ ಸಂಪಾದಿಸಿದ್ದು, ಇವರಲ್ಲಿ 1,71,329 ಮಂದಿ ಜನರಲ್ ಮೆರಿಟ್‌ನ್ನು ಹೊಂದಿದ್ದಾರೆ.ಕರ್ನಾಟಕದ ಖಾಸಗಿ ಕಾಲೇಜುಗಳಲ್ಲಿ 1381 ವಿದ್ಯಾರ್ಥಿಗಳಿಗೆ ಪ್ರವೇಶ ಲಭಿಸಲಿದೆ. ಇದಲ್ಲದೆ ಸರಕಾರಿ ಕಾಲೇಜುಗಳಲ್ಲಿಯೂ ಸೀಟುಗಳು ದೊರೆಯುತ್ತವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News