×
Ad

ಬೆಂಗಳೂರಿನಲ್ಲಿ ಹಠಾತ್ತನೆ ಕುಸಿದ ಮನೆಗಳು

Update: 2016-09-01 17:24 IST

ಬೆಂಗಳೂರು, ಸೆ.1: ಇಲ್ಲಿನ ಕೋಲ್ಸ್ ಪಾರ್ಕ್ ಪ್ರದೇಶದ ಕೆಲವು ನಿವಾಸಿಗಳಿಗೆ ಗುರುವಾರ ಬೆಳಗ್ಗೆ ಆಘಾತಕಾರಿ ಬೆಳವಣಿಗೆ ಕಂಡು ಬಂದಿದೆ. ಅವರ ಮನೆಯ ಕೆಲವು ಭಾಗಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದವು. ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಪ್ರತಿಷ್ಠಿತ ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯ ವಸತಿ ಸಮುಚ್ಚಯದಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ನಿವಾಸಿಗಳು ದೂರಿದ್ದಾರೆ ಎಂದು thenewsminute.com ವರದಿ ಮಾಡಿದೆ. 

ಒಟ್ಟು ಐದು ಮನೆಗಳಿಗೆ ಹಾನಿಯಾಗಿದ್ದು ಈ ಪೈಕಿ ಎರಡು ಮನೆಗಳು ತೀವ್ರ ಹಾನಿಗೊಳಗಾಗಿದ್ದು ಅಲ್ಲಿಂದ ಜನರನ್ನು ಪೊಲೀಸರು ತೆರವುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. 

ಇಲ್ಲಿನ ಪ್ರೋಮೆನೇಡ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರೆಸ್ಟೀಜ್ ಸಂಸ್ಥೆಯ 'ದೇಜವು' ವಸತಿ ಯೋಜನೆ  21  ಮಹಡಿಗಳಲ್ಲಿ 3 ಮತ್ತು 4 ಬೆಡ್ ರೂಂ ಗಳ 40 ಅಪಾರ್ಟ್ ಮೆಂಟ್ ಗಳು ಇರುತ್ತವೆ ಎಂದು ಸಂಸ್ಥೆಯ ವೆಬ್ ಸೈಟ್ ನಲ್ಲಿ ಹೇಳಲಾಗಿದೆ. 

"ನಿರ್ಮಾಣವಾಗುತ್ತಿರುವ ಹೊಸ ಅಪಾರ್ಟ್ ಮೆಂಟ್  ಮುಂದಿನ ಐದು ಮನೆಗಳು ಹಾನಿ ಗೊಳಗಾಗಿವೆ. ಗೋಡೆಗಳಲ್ಲಿ ಬಿರುಕು ಉಂಟಾಗಿದೆ. ನನ್ನ ಮನೆಯ ಹಿಂದಿನ ಭಾಗ ಮುಂಜಾನೆ 5:30ಕ್ಕೆ ಕುಸಿದು ಬಿದ್ದಿದೆ " ಎಂದು ರಹ್ಮತುಲ್ಲಾಹ್ ಎಂಬ ನಿವಾಸಿ thenewsminute.com ಗೆ ಹೇಳಿದ್ದಾರೆ. 

Photos : thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News