ಟರ್ಕಿ ಸಂಘರ್ಷ: 20 ಕುರ್ದಿಶ್ ಬಂಡುಕೋರರು, ಓರ್ವ ಸೈನಿಕ ಹತ

Update: 2016-09-02 18:39 GMT

ಇಸ್ತಾಂಬುಲ್, ಸೆ. 2: ಟರ್ಕಿಯ ಹಿಂಸಾಗ್ರಸ್ತ ಆಗ್ನೇಯ ಭಾಗದಲ್ಲಿ ಕುರ್ದಿಶ್ ಬಂಡುಕೋರರೊಂದಿಗೆ ನಡೆದ ಸಂಘರ್ಷದಲ್ಲಿ ಓರ್ವ ಸೈನಿಕ ಮೃತಪಟ್ಟಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಸರಕಾರಿ ಒಡೆತನದ ಸುದ್ದಿ ಸಂಸ್ಥೆ ಅನಡೊಲು ವರದಿ ಮಾಡಿದೆ.

ಹಕ್ಕಾರಿ ಪ್ರಾಂತದಲ್ಲಿ ನಡೆದ ಕಾಳಗದಲ್ಲಿ 20 ಕುರ್ದಿಶ್ ಬಂಡುಕೋರರೂ ಹತರಾಗಿದ್ದಾರೆ ಎಂದು ಅದು ಶುಕ್ರವಾರ ತಿಳಿಸಿದೆ.

ಎರಡು ವರ್ಷಗಳ ಶಾಂತಿ ಪ್ರಕ್ರಿಯೆ ಕುಸಿತ ಕಂಡ ಬಳಿಕ, ಕುರ್ದಿಶ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಮತ್ತು ಟರ್ಕಿ ಭದ್ರತಾ ಪಡೆಗಳ ನಡುವೆ ಕಳೆದ ವರ್ಷ ಸಂಘರ್ಷ ಪುನಾರಂಭಗೊಂಡಿತ್ತು. ಅಂದಿನಿಂದ 600ಕ್ಕೂ ಅಧಿಕ ಟರ್ಕಿ ಸೈನಿಕರು ಮತ್ತು ಸಾವಿರಾರು ಪಿಕೆಕೆ ಬಂಡುಕೋರರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News