ಯುಎಸ್‌ ಓಪನ್‌: ಸೆರೆನಾ ಹೊರಕ್ಕೆ

Update: 2016-09-09 09:33 GMT

ನ್ಯೂಯಾರ್ಕ್‌, ಸೆ.9: ವಿಶ್ವದ ನಂ.1 ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸೋಲುದರೊಂದಿಗೆ ಇಪ್ಪತ್ತಮೂರು ಗ್ರ‍್ಯಾಂಡ್ ಸ್ಲಾಮ್‌ ಜಯಿಸುವ ಪ್ರಯ್ನದಲ್ಲಿ ಮತ್ತೊಮ್ಮೆ ಎಡವಿದ್ದಾರೆ.
 ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಪಿಲಿಸ್ಕೋವಾ ಅವರು ಸೆರೆನಾಗೆ 6-2, 7-6 (7/5)  ಅಂತರದಲ್ಲಿ ಸೋಲುಣಿಸಿದರು. ಮೊದಲ ಬಾರಿ ಗ್ರ‍್ಯಾಂಡ್ ಸ್ಲಾಮ್‌ ಫೈನಲ್‌ ಪ್ರವೇಶಿಸಿರುವ 24ರ ಹರೆಯದ ಆಟಗಾರ್ತಿ ಪಿಲಿಸ್ಕೋವಾ ಪ್ರಶಸ್ತಿಯ ಸುತ್ತಿನಲ್ಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿರುವ  ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರನ್ನು ಎದುರಿಸಲಿದ್ದಾರೆ.
ಸೆರೆನಾ ಗ್ರ್ಯಾಂಡ್ ಸ್ಲಾಮ್ ಟೂರ್ನಿಗಳಲ್ಲಿ ಇದುವರೆಗೆ 308 ಪಂದ್ಯಗಳಲ್ಲಿ ಗೆಲುವು ಪಡೆದಿದ್ದು ೪೩ ರಲ್ಲಿಯಷ್ಟೇ ಸೋತಿದ್ದಾರೆ.  ಯುಎಸ್‌ ಓಪನ್‌ನಲ್ಲಿ ಏಳನೆ ಪ್ರಶಸ್ತಿ ಗೆಲ್ಲುವ ಕನಸು ದುರವಾಗಿದೆ.  ಅಮೆರಿಕ ಓಪನ್‌ನಲ್ಲಿ 88, ವಿಂಬಲ್ಡನ್‌ನಲ್ಲಿ 86, ಆಸ್ಟ್ರೇಲಿಯಾ ಓಪನ್‌ನಲ್ಲಿ 74 ಮತ್ತು ಫ್ರೆಂಚ್‌ ಓಪನ್‌ನಲ್ಲಿ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸೆರನಾ ಈ ಸೋಲಿನೊಂದಿಗೆ ನಂಬರ‍್ ಒನ್‌ ಸ್ಥಾನ ಕಳೆದುಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News