ದಕ್ಷಿಣ ಕೊರಿಯದ ರಕ್ಷಣೆಗೆ ಸರ್ವ ಕ್ರಮ: ಒಬಾಮ

Update: 2016-09-09 18:25 GMT

ಸಿಯೋಲ್, ಸೆ. 9: ಉತ್ತರ ಕೊರಿಯದ ಬೆದರಿಕೆಯಿಂದ ದಕ್ಷಿಣ ಕೊರಿಯವನ್ನು ರಕ್ಷಿಸಲು, ಆ ದೇಶದೊಂದಿಗಿನ ರಕ್ಷಣಾ ಒಪ್ಪಂದವೊಂದರ ಅನ್ವಯ ಎಲ್ಲ ಕ್ರಮಗಳನ್ನು ತಾನು ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷೀಯ ಕಚೇರಿ ಶುಕ್ರವಾರ ತಿಳಿಸಿದೆ. ಉತ್ತರ ಕೊರಿಯದಲ್ಲಿ ಪರಮಾಣು ಪರೀಕ್ಷೆ ನಡೆದ ಬಳಿಕ, ಒಬಾಮ ಮತ್ತು ದಕ್ಷಿಣ ಕೊರಿಯದ ಅಧ್ಯಕ್ಷೆ ಪಾರ್ಕ್ ಗುಯನ್-ಹೈ ಟೆಲಿಫೋನ್‌ನಲ್ಲಿ ಮಾತನಾಡಿದರು ಎಂದು ದಕ್ಷಿಣ ಕೊರಿಯದ ಬ್ಲೂ ಹೌಸ್ ತಿಳಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನೂತನ ನಿರ್ಣಯವೊಂದನ್ನು ಅಂಗೀಕರಿಸುವುದು ಸೇರಿದಂತೆ, ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸುವಂತೆ ಉತ್ತರ ಕೊರಿಯದ ಮೇಲೆ ಒತ್ತಡ ಹೇರಲು ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಲು ಇಬ್ಬರು ನಾಯಕರು ಒಪ್ಪಿಕೊಂಡರು ಎಂದು ದಕ್ಷಿಣ ಕೊರಿಯ ಅಧ್ಯಕ್ಷೀಯ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News