ಕಾಫಿ ಯಂತ್ರದ ಅವಾಂತರ : ತುರ್ತು ಲ್ಯಾಂಡಿಂಗ್ ಮಾಡಿದ ಅಂತಾರಾಷ್ಟ್ರೀಯ ವಿಮಾನ

Update: 2016-09-19 03:08 GMT

ವಾಷಿಂಗ್ಟನ್, ಸೆ.19: ಕಾಫಿ ಯಂತ್ರದ ಅವಾಂತರದಿಂದಾಗಿ 223 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಅವರೂಪದ ಘಟನೆ ವರದಿಯಾಗಿದೆ.

ವರ್ಜೀನಿಯಾದ ವಾಷಿಂಗ್ಟನ್ ಡಲ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮ್ಯೂನಿಚ್‌ಗೆ ಹೊರಟಿದ್ದ ಎ 333-300 ವಿಮಾನದ ಕಾಫಿಯಂತ್ರದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡು, ಅದನ್ನು ಸ್ವಿಚ್ ಆಫ್ ಮಾಡಲೂ ಸಾಧ್ಯವಾಗದ ಕಾರಣದಿಂದ ಪ್ರಯಾಣಿಕರಿಗೆ ತುರ್ತು ಸಂದೇಶ ನೀಡಿ, ಪಕ್ಕದ ನಿಲ್ದಾಣದಲ್ಲಿ ತುರ್ತಾಗಿ ಇಳಿಯಿತು.

ಈ ವಿಮಾನ ಸಿಡ್ನಿಯಿಂದ ನೈರುತ್ಯಕ್ಕೆ 70 ಮೈಲಿ ದೂರದಲ್ಲಿ ಚಲಿಸುತ್ತಿದ್ದಾಗ ಪ್ರಯಾಣಿಕರೊಬ್ಬರು, ವಿಮಾನದ ಒಳಗಿನಿಂದ ಸುಟ್ಟ ವಾಸನೆ ಬರುತ್ತಿರುವ ಬಗ್ಗೆ ದೂರು ನೀಡಿದರು. ತಕ್ಷಣ ಗ್ರೌಂಡ್ ಕಂಟ್ರೋಲ್‌ಗೆ ಮಾಹಿತಿ ನೀಡಲಾಯಿತು ಎಂದು ವೈಮಾನಿಕ ಮಾಹಿತಿ ವೆಬ್‌ಸೈಟ್ ಏರೊಇನ್‌ಸೈಡ್ ವರದಿ ಮಾಡಿದೆ.

ತಕ್ಷಣ ವಿಮಾನವನ್ನು ಬೋಸ್ಟನ್‌ಗೆ ತಿರುಗಿಸಿ, 70 ನಿಮಿಷ ಬಳಿಕ ಲ್ಯಾಂಡಿಂಗ್ ಆಗಿದೆ. ಈ ಘಟನೆ ಸೆಪ್ಟೆಂಬರ್ 8ರಂದು ಸಂಭವಿಸಿದ್ದರೂ, ಈಗಷ್ಟೇ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News