ನಕಲಿ ವೈದ್ಯರಿಗೆ ಕಡಿವಾಣ ಹಾಕಿ

Update: 2016-09-22 18:55 GMT

ಮಾನ್ಯರೆ,
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ನಡೆಸಿದ ಭಾರತದ ಆರೋಗ್ಯ ಕಾರ್ಯಪಡೆ ಸಮೀಕ್ಷೆಯಲ್ಲಿ ಭಾರತದ ಆರೋಗ್ಯ ಇಲಾಖೆಯಲ್ಲಿ ಶೇ.57ರಷ್ಟು ಮಂದಿ ನಕಲಿ ವೈದ್ಯರಿದ್ದಾರೆ ಮತ್ತು ಶೇ.31ರಷ್ಟು ವೈದ್ಯರು ಕಲಿತದ್ದು ಕೇವಲ ಪ್ರೌಢ ಶಿಕ್ಷಣ ಮಾತ್ರ ಎಂಬ ಆಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿದೆ. ಇದು ನಮಗೆ ಆಶ್ಚರ್ಯವೇ ಅನಿಸಿದರೂ ಭವಿಷ್ಯತ್ತಿನ ದೃಷ್ಟಿಯಿಂದ ಇಡೀ ಮನುಕುಲಕ್ಕೆ ಅಪಾಯಕಾರಿಯಾದುದು
  ವೈದ್ಯಕೀಯ ಅರ್ಹತೆ ಇಲ್ಲದವರೂ ವೈದ್ಯ ವೃತ್ತಿ ನಡೆಸುತ್ತಿರುವುದು ಭಾರತದ ಕಾನೂನಿನ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ನಮ್ಮ ಸಂವಿಧಾನದ ಅನುಚ್ಛೇದ 21ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ದೊರಕಿಸಿ ಕೊಡುವುದು ಸರಕಾರಗಳ ಹೊಣೆಯಾಗಿದೆ. ಈ ದಿಸೆಯಲ್ಲಿ ಭಾರತದ ಆರೋಗ್ಯ ಇಲಾಖೆಯು ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ನಕಲಿ ವೈದ್ಯರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಬೇಕು.
 -ಮಾಗೊಂಡಯ್ಯ ಪಟೇದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News