ವಸತಿ ಯೋಜನೆಗಳು ಬಡವರನ್ನು ತಲುಪಲಿ

Update: 2016-09-28 18:39 GMT

ಮಾನ್ಯರೆ,
ರಾಜ್ಯದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ, ಅಂಬೇಡ್ಕರ್ ಆವಾಸ್, ರಾಜೀವಗಾಂಧಿ, ಇಂದಿರಾಗಾಂಧಿ ಮತ್ತು ಇನ್ನಿತ್ತರ ವಸತಿ ಯೋಜನೆ ಅಡಿಯಲ್ಲಿ ಮನೆಗಳು ಮಂಜೂರಾಗುತ್ತಿವೆ. ಆದರೆ ನಿಜವಾದ ವಸತಿ ರಹಿತರಿಗೆ ಈ ಮನೆಗಳು ದೊರಕುತ್ತಿವೆಯೇ?. ಇಂತಹ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಸಿಗದೆ ಸ್ಥಳೀಯ ರಾಜಕೀಯ ಪ್ರತಿನಿಧಿಗಳ ಪಾಲಾಗುತ್ತಿವೆ. ಸುಮಾರು 15ರಿಂದ 40,000 ವರೆಗೆ ಮನೆಗಳು ಪ್ರತಿ ವರ್ಷ ಮಂಜೂರಾಗುತ್ತವೆ. ಉಳ್ಳವರೇ ಮನೆಗಳನ್ನು ಕೊಂಡು ಕೊಳ್ಳುತ್ತಾರೆ. ಇಂದಿಗೂ ವಸತಿ ರಹಿತ ಜನರು ಅದೇ ಗುಡಿಸಲು, ಮುರಕಲು ಹಾಗೂ ಶೆಡ್ಡಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಭ್ರಷ್ಟ ವ್ಯವಸ್ಥೆ ಕೊನೆಗೊಂಡು ಅರ್ಹ ಫಲಾನುಭವಿಗಳಿಗೆ ಮನೆಗಳು ದೊರಕುವಂತೆ ಮಾಡಲು ರಾಜ್ಯ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಕನಿಷ್ಠ ಪಕ್ಷ ಮನೆ ಹಂಚಿಕೆ ಸಂದರ್ಭದಲ್ಲಿ ಗ್ರಾಮ ಸಭೆಗಳನ್ನು ಕರೆದು ನಿವೇಶನ ಹಂಚಿಕೆ ನಿಯಮಾನುಸಾರವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು.

Writer - -ಸಬೀನಾ, ರಾಯಚೂರು

contributor

Editor - -ಸಬೀನಾ, ರಾಯಚೂರು

contributor

Similar News