×
Ad

ವಿದ್ಯಾರ್ಥಿಯ ಕೈ ಕಚ್ಚಿದ ಲೇಡಿ ಕಂಡಕ್ಟರ್!

Update: 2016-09-29 11:22 IST

ಬೆಂಗಳೂರು, ಸೆ.29: ಬಸ್ ಪಾಸ್ ವಿಚಾರಕ್ಕೆ ಸಂಬಂಧಿಸಿ ಬಿಎಂಟಿಸಿ ಬಸ್‌ನ ಮಹಿಳಾ ಕಂಡಕ್ಟರ್‌ವೊಬ್ಬರು ವಿದ್ಯಾರ್ಥಿಯ ಕೈಗೆ ಕಚ್ಚಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಜಾಲಹಳ್ಳಿ-ಕೆಆರ್ ಪುರಂ ಮಾರ್ಗದ ಬಸ್‌ನ ನಿರ್ವಾಹಕಿ ಗಂಗಮ್ಮನ ಗುಡಿಯ ಕಮ್ಮಗೊಂಡನಹಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿಯೊಂದಿಗೆ ಬಸ್ ನಿಲ್ದಾಣದಲ್ಲಿ ಹೊಡೆದಾಟ ನಡೆಸಿದ್ದಲ್ಲದೆ ಓರ್ವ ವಿದ್ಯಾರ್ಥಿಯ ಕೈಗೆ ಕಚ್ಚಿ ಗಾಯಗೊಳಿಸಿದ್ದಾರೆ. ವಿದ್ಯಾರ್ಥಿಗಳೊಂದಿಗಿನ ನೂಕಾಟದಲ್ಲಿ ಕಂಡಕ್ಟರ್ ಕೆಳಗೆ ಬಿದ್ದಿದ್ದರು.

 ಜಗಳ ಬಿಡಿಸಲು ಬಂದ ಜಾಲಹಳ್ಳಿ ಸಂಚಾರಿ ಪೊಲೀಸರ ಜೊತೆಗೂ ಕಂಡಕ್ಟರ್ ವಾಗ್ವಾದ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News