×
Ad

ಕೇಂದ್ರ ಸರಕಾರದ ವಿರುದ್ಧ ಗೃಹಸಚಿವ ಡಾ.ಜಿ ಪರಮೇಶ್ವರ್ ಅಸಮಾಧಾನ

Update: 2016-10-01 13:07 IST

ಬೆಂಗಳೂರು, ಅ.1: ಕೇವಲ ಸೆಪ್ಟೆಂಬರ್ ಒಂದು ತಿಂಗಳ ಅವಧಿಯಲ್ಲಿ 6 ಬಾರಿ  ಸುಪ್ರೀಂ ಕೋಟ್೯ ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ತೀರ್ಪು ನೀಡಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ನಿನ್ನೆ ಮತ್ತೆ 6000 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ಹಿರಿಯರಾದ ಮಾಜಿ ಪ್ರಧಾನಿ ದೇವೆಗೌಡರು ಇಡೀ ಜೀವನ ನೀರಾವರಿಗಾಗಿ ಹೋರಾಟ ಮಾಡಿದ್ದಾರೆ. ಈ ವಯಸ್ಸಿನಲ್ಲೂ ಅವರು  ಉಪವಾಸ ಕುಳಿತಿರುವುದನ್ನು ಕೋಟ್೯ ಅಥ೯ ಮಾಡಿಕೊಳ್ಳಬೇಕು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಅನೇಕ ಬಾರಿ ಪ್ರಧಾನಿ ಮೋದಿ ಕಾವೇರಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕೆಂಬ ವಿಚಾರ ಪ್ರಸ್ತಾಪ ಮಾಡಿದ್ದೇವೆ. ಎಲ್ಲರೂ ಪ್ರಧಾನಿಯವರ ಮದ್ಯಪ್ರವೇಶಕ್ಕೆ ಎದುರು ನೋಡುತ್ತಿದ್ದಾರೆ. ನಿನ್ನೆ ಅಟಾನಿ೯ ಜನರಲ್ ಕೂಡಾ ಕಾವೇರಿ ನಿವ೯ಹಣಾ ಮಂಡಳಿ ರಚಿಸುವುದಾಗಿ  ತಿಳಿಸಿದ್ದಾರೆ. ಇದನ್ನ ನೋಡಿದರೆ ಕೇಂದ್ರ ಸರಕಾರ ಕೂಡಾ ನಮ್ಮ ವಿರುದ್ಧ ಇದೆ ಅನ್ನುವುದನ್ನು ತೋರಿಸುತ್ತದೆ ಎಂದು ಎಂದು ಹೇಳಿದರು. 

ಇಂದು ಸಿಎಂ  ಸವ೯ಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಕುಲಂಕುಷ ಚಚೆ೯ ಮಾಡುತ್ತೇವೆ. ಸವ೯ಪಕ್ಷ ಸಭೆಯಲ್ಲಿ ದೇವೆಗೌಡರು, ಕುಮಾರಸ್ಚಾಮಿ ಭಾಗವಹಿಸಿ ಸಲಹೆ ನೀಡಿದ್ದಾರೆ. ನಮ್ಮಲ್ಲಿ ನೀರಿಲ್ಲ ಅನ್ನೋದನ್ನ ಪದೇ ಪದೇ ಕೋಟ್೯ ಗೆ ತಿಳಿಸಿದ್ದೇವೆ. ನಾರಿಮನ್  ಬಗ್ಗೆ ಎಲ್ಲಾ ಸೇರಿ ಚಚೆ೯ ಮಾಡುತ್ತೇವೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News